Sunday, December 22, 2024

100 ಕೋಟಿ ಕ್ಲಬ್​ ಸೇರಿದ ‘ಡಂಕಿ’!

ರಾಜ್​ಕುಮಾರ್​ ಹಿರಾನಿ ನಿರ್ದೇಶನ ಮಾಡಿದ ‘ಡಂಕಿ’ ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಈ ಚಿತ್ರಕ್ಕೆ ಕಲೆಕ್ಷನ್​ ಆಗುತ್ತಿಲ್ಲ. ಹಾಗಂತ ಚಿತ್ರತಂಡಕ್ಕೆ ನಿರಾಸೆ ಕೂಡ ಆಗಿಲ್ಲ. ಪ್ರತಿ ದಿನವೂ ಈ ಚಿತ್ರ ಬಹುಕೋಟಿ ರೂಪಾಯಿ ಕಲೆಕ್ಷನ್​ ಮಾಡುತ್ತಲೇ ಇದೆ.

ಇದನ್ನೂ ಓದಿ: ಅಯೋಧ್ಯೆಗೆ ಪಾದಯಾತ್ರೆ ಹೊರಟ ಮುಸ್ಲಿಂ ಯುವತಿ!

ಕ್ರಿಸ್​ಮಸ್​ ರಜೆಯ ಪ್ರಯುಕ್ತ ರಿಲೀಸ್​ ಆಗಿರುವ ‘ಡಂಕಿ’ ಸಿನಿಮಾ ಈಗ 100 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಆ ಮೂಲಕ ನಿರ್ಮಾಪಕರ ಮುಖದಲ್ಲಿ ನಗು ಮೂಡಿಸಿದೆ. ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನ ‘ಡಂಕಿ’ ಗಳಿಸಿದ್ದು 28 ಕೋಟಿ ರೂಪಾಯಿ. ಎರಡನೇ ದಿನ 20 ಕೋಟಿ ರೂಪಾಯಿ ಕಲೆಕ್ಷನ್​ ಆಯಿತು. ಮೂರನೇ ದಿನ 24.50 ಕೋಟಿ ರೂಪಾಯಿ ಕಮಾಯಿ ಮಾಡಿತು. ನಾಲ್ಕನೇ ದಿನ 29 ಕೋಟಿ ರೂಪಾಯಿ ಗಳಿಸುವ ಮೂಲಕ ಆಶಾಭಾವನೆ ಮೂಡಿಸಿತು.

ಹೀಗೆ ನಿಧಾನವಾಗಿ ಚಿತ್ರದ ಕಲೆಕ್ಷನ್​ ಏರಿಕೆಯಾಗಿದೆ. ನಾಲ್ಕು ದಿನಗಳಲ್ಲಿ ಸಿನಿಮಾದ ಒಟ್ಟು ಗಳಿಗೆ 101.50 ಕೋಟಿ ರೂಪಾಯಿ ಎಂದು ಹೇಳಲಾಗಿದೆ.

RELATED ARTICLES

Related Articles

TRENDING ARTICLES