Friday, January 3, 2025

ಕನ್ನಡಕ್ಕೆ ಮತ್ತೆ ಮೆಗಾಸ್ಟಾರ್ : ದರ್ಶನ್ ಮುಂದಿನ ಚಿತ್ರದಲ್ಲಿ ಚಿರಂಜೀವಿ?

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಚಿತ್ರದಲ್ಲಿ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ನಟಿಸಲಿದ್ದಾರೆ ಎಂಬ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ. ಈ ಸುದ್ದಿ ಕೇಳಿ, ಡಿ ಬಾಸ್ ಹಾಗೂ ಮೆಗಾಸ್ಟಾರ್ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ.

ನಿರ್ದೇಶಕ ಜೋಗಿ ಪ್ರೇಮ್ ಹಾಗೂ ಡಿ ಬಾಸ್ ಕಾಂಬಿನೇಷನ್​ನಲ್ಲಿ ಮೂಡಿ ಬರಲಿರುವ D58 ಸಿನಿಮಾದಲ್ಲಿ ಚಿರಂಜೀವಿ ಅವರನ್ನು ಮತ್ತೆ ಕನ್ನಡ ಚಿತ್ರರಂಗಕ್ಕೆ ಕರೆತರಲು ಸಿದ್ಧತೆ ನಡೆಸಿದ್ದಾರೆ.

ಪ್ರೇಮ್ ಅವರು ಡಿಸೆಂಬರ್ 22ರಂದು ಹೈದ್ರಾಬಾದ್​ಗೆ ಹೋಗಿದ್ದರು. ಈ ವೇಳೆ ಚಿರಂಜೀವಿಗೆ ಕಥೆ ಹೇಳಿ ಬಂದಿದ್ದಾರಂತೆ. ಪ್ರೇಮ್ ಕಥೆ ಕೇಳಿ ಚಿರಂಜೀವಿ ಕೂಡ ಓಕೆ ಅಂತ ಹೇಳಿದ್ದಾರಂತೆ. ಎಲ್ಲವೂ ಅಂದುಕೊಂಡಂತೆ ಆದ್ರೆ ದರ್ಶನ್ ಜೊತೆ ಚಿರಂಜೀವಿ ಕೂಡ ಕೈ ಜೋಡಿಸಲಿದ್ದಾರೆ.

22 ವರ್ಷಗಳ ಬಳಿಕ ಕನ್ನಡಕ್ಕೆ ರೀ ಎಂಟ್ರಿ

22 ವರ್ಷಗಳ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಸಿಪಾಯಿ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದರು. ಇದೀಗ ಮತ್ತೆ ಕನ್ನಡ ಸಿನಿಮಾಗೆ ರೀ ಎಂಟ್ರಿ ಕೊಡ್ತಿದ್ದಾರೆ. ಅಂದಹಾಗೆ ಮೆಗಾಸ್ಟಾರ್ ಚಿರಂಜೀವಿ ಕನ್ನಡದಲ್ಲೂ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ KVN ಪ್ರೊಡಕ್ಷನ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಚಿರಂಜೀವಿ ಅಭಿನಯಿಸಲಿದ್ದಾರೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES