ಕೆಟ್ಟದನ್ನು ತೊಡೆದು ಹಾಕಲು ಯೇಸುಕ್ರಿಸ್ತ್ ಜನಿಸಿದ ಎಂದು ಈ ದಿನವನ್ನು ಕ್ರೈಸ್ತ ಬಾಂಧವರು ಅತ್ಯಂತ ಸಡಗರ ಸಂಭ್ರಮದಿಂದ ಕ್ರಿಸ್ಮಸ್ ಹಬ್ಬವನ್ನೂ ಆಚರಣೆ ಮಾಡುತ್ತಾರೆ.
ಕ್ರಿಶ್ಚಿಯನ್ ಜನಾಂಗದವರು ಪ್ರತಿ ವರ್ಷ ಡಿಸೆಂಬರ್ 25ರಂದು ಮಾಡಲಾಗುತ್ತದೆ. ಈ ದಿನ ಯೇಸುಕ್ರಿಸ್ತ್ ಜನಿಸಿದ ದಿನ ಎನ್ನಲಾಗುತ್ತದೆ.
ಡಿಸೆಂಬರ್ 24ರ ರಾತ್ರಿಯಿಂದಲೇ ಆಚರಣೆಗಳು ಆರಂಭವಾಗುತ್ತವೆ. ಚರ್ಚ್‌ಗಳಲ್ಲಿ, ಮನೆಗಳಲ್ಲಿ ಕಣ್ಮನ ಸೆಳೆಯುವಂತಹ ಅಲಂಕಾರ ಮಾಡಲಾಗುತ್ತದೆ. ಯೇಸು ಜನಿಸಿದ ದಿನ ಎಲ್ಲರೂ ಮನೆಗೆ ಹೊಸ ಅತಿಥಿ ಬಂದಷ್ಟೇ ಸಂತಸಗೊಂಡು ಹೊಸ ಬಟ್ಟೆ ಧರಿಸಿ, ಸಿಹಿ ಖಾದ್ಯಗಳನ್ನು ತಯಾರಿಸಿ ಎಲ್ಲರ ಒಳಿತಿಗಾಗಿ ಇಂದು ಪ್ರಾರ್ಥನೆ ಮಾಡುತ್ತಾರೆ.
ಇತಿಹಾಸ
ಕ್ರೈಸ್ತ ಬಾಂಧವರ ಆರಾಧ್ಯ ದೈವ ಯೇಸುಕ್ರಿಸ್ತ. ಯೇಸು ಜನರ ಒಳಿತಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿ ಮತ್ತೆ ಹುಟ್ಟಿಬಂದ ಎಂದು ಕ್ರಿಶ್ಚಿಯನ್ನರ ಪವಿತ್ರ ಗ್ರಂಥವಾದ ಬೈಬಲ್ ನಲ್ಲಿ ಹೇಳಲಾಗುತ್ತದೆ. ಇಸ್ರೇಲಿಯಾದ ಬೆಡ್ಲೆಹೆಮ್ ನಗರದಲ್ಲಿ ಕ್ರಿ.ಪೂ 4ರಲ್ಲಿ ಯೇಸು ಜನಿಸಿದ ಎಂದು ಹೇಳಲಾಗುತ್ತದೆ. ಜೋಸೆಫ್ ಮತ್ತು ಮೇರಿ ಮಾತ ಯೇಸುಕ್ರಿಸ್ತನ ತಂದೆ ತಾಯಿ. ಈ ದಂಪತಿಗೆ ದೇವರ ಆಶೀರ್ವಾದದಿಂದ ಯೇಸು ಜನಿಸಿದನು. ಯೇಸು ತಂದೆ ಜೋಸೆಫ್ ವೃತ್ತಿಯಲ್ಲಿ ಬಡವನಾಗಿದ್ದರು. ಆದರೆ ತಂದೆ ಕೆಲಸದಲ್ಲಿ ಸಹಾಯ ಮಾಡುವ ಮೂಲಕ ಯೇಸು ಸಮಾಜ ಕಲ್ಯಾಣವನ್ನೂ ಮಾಡುತ್ತಿದ್ದರು. ಕಥೆ ಪ್ರಕಾರ ಯಹೂದಿ ಧರ್ಮಕ್ಕೆ ಸೇರಿದ ಯೇಸು ಜನರಿಗೆ ಭೋದಿಸುವುದು ಯಹೂದಿಗಳ ಮೂಲಭೂತವಾದಿಗಳಿಗೆ ಇಷ್ಟವಿರಲಿಲ್ಲ. ಹೀಗಾಗಿ ಯೇಸುವಿನ ವಿರುದ್ಧ ಯಹೂದಿಗಳು ದ್ವೇಷ ಸಾಧಿಸುತ್ತಿದ್ದರು.
ಕ್ರಿಸ್ಮಸ್ ಆಚರಣೆ
ಕ್ರಿಸ್ಮಸ್ ಆಚರಣೆ ಮೊದಲ ಬಾರಿಗೆ ಕ್ರಿಸ್ತಪೂರ್ವ 336ರಲ್ಲಿ ರೋಮ್‌ನಲ್ಲಿ ಕ್ರಿಸ್ಮಸ್ ಆಚರಿಸಲಾಯಿತು. ಬಳಿಕ ಪೋಪ್ ಜೂಲಿಯಸ್ ಯೇಸುಕ್ರಿಸ್ತನ ಜನ್ಮದಿನವನ್ನು ಡಿಸೆಂಬರ್ 25ರಂದು ಆಚರಸಿದಲು ಅಧಿಕೃತವಾಗಿ ಘೋಷಣೆ ಮಾಡಿದರು. ಅಂದಿನಿಂದ ಪಾಶ್ಚಿಮಾತ್ಯ ದೇಶದಲ್ಲಿ ಕ್ರಿಸ್‌ಮಸ್‌ನ್ನು ರಜಾದಿನವಾಗಿ ಆಚರಿಸಲಾಗುತ್ತದೆ.
ಹಿಂಸಿಸಿದರೂ ಒಳಿತನ್ನೇ ಬಯಸಿದ ಯೇಸು
ಹಿಂಸಿಸಿದರೂ ಒಳಿತನ್ನೇ ಬಯಸಿದ ಯೇಸು ಆದರೂ ವಿರೋಧವನ್ನು ನಿರ್ಲಕ್ಷಿಸಿ ಯೇಸು ಸ್ಥಳದಿಂದ ಸ್ಥಳಕ್ಕೆ ಹೋಗಿ ಜನರಿಗೆ ಬೋಧನೆ ಮಾಡುತ್ತಿದ್ದರು. ಇದು ಯಹೂದಿಗಳ ಮೂಲಭೂತವಾದಿಗಳಿಗೆ ಸಹಿಸಲಾಗಲಿಲ್ಲ. ಹೀಗಾಗಿ ಯೇಸುವಿನನ್ನು ಸಾಯಿಸಲು ನಿರ್ಧರಿಸಿದರು. ಯೇಸುವನ್ನು ರೋಮನ್ ಗವರ್ನರ್ ಮುಂದೆ ಹಾಜರುಪಡಿಸಿದರು. ಬಳಿಕ ಯೇಸುವಿನನ್ನು ಶಿಲುಬೆಗೇರಿಸುವ ಮೂಲಕ ಶಿಕ್ಷೆ ನೀಡಿದರು.