Thursday, December 19, 2024

ನೀಲ್ ಕನ್ನಡದಲ್ಲಿ ನೆಲೆಯೂರಲು ಕಾರಣವೇ ಆ ವ್ಯಕ್ತಿ: ‘ಡಿ’ ಸೀಕ್ರೆಟ್!

ಫಿಲ್ಮ್​ ಡೆಸ್ಕ್ : ಪ್ರಶಾಂತ್ ನೀಲ್. ಸದ್ಯ ಇಂಡಿಯನ್ ಸಿನಿ ಇಂಡಸ್ಟ್ರಿಯಲ್ಲಿ ಟಾಪ್ ಲಿಸ್ಟ್​​​ನಲ್ಲಿರೋ ಸ್ಟಾರ್ ಡೈರೆಕ್ಟರ್. ಸಲಾರ್ ಮೂಲಕ ಸತತ ನಾಲ್ಕನೇ ಹಿಟ್ ಕೊಟ್ಟಿರೋ ಪ್ರಶಾಂತ್ ನೀಲ್, ತಮ್ಮ ಕಥೆ ಹೇಳುವ ತಂತ್ರ ಮೇಕಿಂಗ್ ಸ್ಕಿಲ್​ನಿಂದ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಕನ್ನಡದ ಉಗ್ರಂನಿಂದ ಶುರುವಾದ ನೀಲ್​ ವಿಜಯದ ದಂಡಯಾತ್ರೆ ಯಶಸ್ವಿಯಾಗಿ ಸಾಗ್ತಾ ಇದೆ. ಇಂಥಾ ಪ್ರಶಾಂತ್​ ನೀಲ್ ಹೀಗೆ ನೆಲೆಕಂಡುಕೊಳ್ಳೋದಕ್ಕೆ ಆ ಒಬ್ಬ ವ್ಯಕ್ತಿ ಕಾರಣ ಯಾರದು ..?  ಇಲ್ಲಿದೆ ನೋಡಿ ಆ ಕುರಿತ ಇನ್ ಟ್ರೆಸ್ಟಿಂಗ್ ಸ್ಟೋರಿ.

ಪ್ರಶಾಂತ್ ನೀಲ್, ಸದ್ಯ ಭಾರತೀಯ ಸಿನಿರಂಗದಲ್ಲಿ ಸಿಕ್ಕಾಪಟ್ಟೆ ಚಾಲ್ತಿಯಲ್ಲಿರೋ ಹೆಸರು. ಬಹುಶಃ ರಾಜಮೌಳಿ ಬಳಿಕ ಈ ಪರಿ ಕ್ರೇಜ್ ಸೃಷ್ಟಿಸಿದ ಮತ್ತೊಬ್ಬ ಸೌತ್ ಡೈರೆಕ್ಟರ್ ಇಲ್ಲವೇ ಇಲ್ಲ ಎನ್ನಬಹುದು. ಅದ್ರಲ್ಲೂ ನಮ್ಮ ಕನ್ನಡದ ನೀಲ್, ಇವತ್ತು ಇಡೀ ಭಾರತೀಯ ಸಿನಿರಂಗವನ್ನ ತನ್ನ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ.

ಪ್ರಶಾಂತ್ ಕಥೆ ಹೇಳುವ ಶೈಲಿ, ಅವರ ಡಾರ್ಕ್​ ಸೆಂಟ್ರಿಕ್ ಥೀಮ್ ಮಾಯೆ.. ಆ ದೊಡ್ಡ ಸೆಟ್​​ಗಳು, ಅದ್ಧೂರಿ  ಆ್ಯಕ್ಷನ್​​ಗಳು ಹೊಸತೊಂದು ಲೋಕವನ್ನೇ ಪ್ರೇಕ್ಷಕರ ಮುಂದೆ ನೀಲ್ ಕಟ್ಟಿಕೊಡುವ ಪರಿ ಅದ್ಭುತ. ಸದ್ಯ ತೆರೆಗೆ ಬಂದಿರೋ ಸಲಾರ್ ಮೊದಲ ದಿನವೇ 175 ಕೋಟಿ ಗಳಿಸೋದ್ರೊಂದಿಗೆ ನೀಲ್ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ.

ಅಚ್ಚರಿ ಅಂದ್ರೆ ಸಲಾರ್ ಸಿನಿಮಾದ ಕಥೆ, ಅವರದ್ದೇ ಮೊದಲ ಚಿತ್ರ ಉಗ್ರಂನ ಯಥಾವತ್ ರೂಪ. ಹೀಗೆ ತನ್ನದೇ ಹಿಂದಿನ ಸಿನಿಮಾವನ್ನ ಮತ್ತೊಬ್ಬ ಸ್ಟಾರ್ ಜೊತೆಗೆ ಮತ್ತಷ್ಟು ಅದ್ಧೂರಿಯಾಗಿ ಮರುನಿರ್ಮಿಸಿ, ಗೆದ್ದು ತೋರಿಸಿದ ಮೊದಲ ನಿರ್ದೇಶಕ ಕೂಡ ಇವರೇ.

ನೀಲ್ ನೆಲೆಯೂರಲು ಕಾರಣವೇ  ಆ ವ್ಯಕ್ತಿ.. ‘ಡಿ’ ಸೀಕ್ರೆಟ್ :

ಸದ್ಯ, ಒಂದೊಂದೇ ಕೋಟೆಗಳನ್ನ ಗೆಲ್ತಾ ಗೆಲುವಿನ ಉತ್ತುಂಗದಲ್ಲಿರುವ ಪ್ರಶಾಂತ್ ನೀಲ್, ಇದೇ ಟೈಮ್​ನಲ್ಲಿ ತಮ್ಮ ಹೋರಾಟದ ದಿನಗಳನ್ನೂ ಮೆಲುಕು ಹಾಕಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಉಗ್ರಂ ಸಿನಿಮಾ ಸಮಯದಲ್ಲಿನ ಕಷ್ಟಗಳನ್ನ ಮೆಲುಕು ಹಾಕಿದ್ದಾರೆ. ಅಸಲಿಗೆ ಉಗ್ರಂಗೆ ನೀಲ್​ ನಿರ್ಮಾಪಕ ಕೂಡ, ಬರೊಬ್ಬರಿ 4 ವರ್ಷಗಳ ಕಾಲ ಆ ಚಿತ್ರ ಮಾಡಿದ್ರು. ಆ ಕಾಲಕ್ಕೆ ತಮ್ಮ ಮನೆಯೊಂದನ್ನ ಮಾರಿಕೊಂಡಿದ್ರಂತೆ.

ಉಗ್ರಂ ಸಿನಿಮಾ ರಿಲೀಸ್ ಹೊಸ್ತಿಲಲ್ಲಿದ್ದಾಗಂತೂ ಯಾವ ವಿತರಕರು ಕೂಡ ಚಿತ್ರವನ್ನ ಕೊಳ್ಳೋದಕ್ಕೆ ಮುಂದೆ ಬಂದಿರಲಿಲ್ಲ. ಆಗ ಅವರೊಬ್ಬರು ಕೈ ಹಿಡಿಯದೇ ಹೋಗಿದ್ರೆ ಉಗ್ರಂ ರಿಲೀಸೇ ಆಗ್ತಿರಲಿಲ್ಲ. ಆವತ್ತು ಉಗ್ರಂನ ಮೆಚ್ಚಿ ರಿಲೀಸ್ ಆಗುವಂತೆ ನೋಡಿಕೊಂಡು, ನೀಲ್ ನೆಲೆಯೂರುವಂತೆ ಮಾಡಿದ್ದು ಬೇರ್ಯಾರೂ ಅಲ್ಲ ಚಾಲೆಂಜಿಗ್ ಸ್ಟಾರ್ ದರ್ಶನ್.

ಹೌದು, 2014ರಲ್ಲಿ ಉಗ್ರಂ ಚಿತ್ರವನ್ನ ರಾಜ್ಯಾದ್ಯಂತ ಡಿಸ್ಟ್ರಿಬ್ಯೂಟ್ ಮಾಡಿದ್ದು ತೂಗುದೀಪ ಡಿಸ್ಟ್ರಿಬ್ಯೂಷನ್. ಅಷ್ಟೇ ಅಲ್ಲ ಉಗ್ರಂ ಚಿತ್ರವನ್ನ ನೋಡಿ, ನಿರ್ದೇಶಕ ಪ್ರಶಾಂತ್ ಕೆಲಸವನ್ನ ಡಿ ಬಾಸ್ ಕೊಂಡಾಡಿದ್ರು. ಈ ಡೈರೆಕ್ಟರ್ ಒಳಗಡೆ ಒಂದು ಫೈರ್ ಇದೆ ಅಂದಿದ್ರು.

ಆವತ್ತು ದರ್ಶನ್ ಗುರುತಿಸಿದ ಆ ಫೈರ್ ಇವತ್ತು ವಿಶ್ವದಾದ್ಯಂತ ಧಗಧಗಿಸ್ತಾ ಇದೆ. ಉಗ್ರಂ ಬಳಿಕ ಕೆಜಿಎಫ್ ನಿರ್ದೇಶಿಸಿದ ನೀಲ್ ಮತ್ತೊಂದು ಲೆವೆಲ್ ಗೆ ಹೋದ್ರು. ಮತ್ತೀಗ ಸಲಾರ್ ಮೂಲಕ ಮತ್ತೊಂದು ಹೆಜ್ಜೆ ಮೇಲೆಕ್ಕೆ ಬೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಶಾಂತ್ ನೀಲ್ ಕೈಯಲ್ಲಿ ಸಾಲು ಸಾಲು ಸಿನಿಮಾ ಇವೆ. ಸಲಾರ್ ಬಳಿಕ ಜ್ಯೂ.ಎನ್​ಟಿಆರ್ ಜೊತೆ ನೀಲ್ ಸಿನಿಮಾ ಮಾಡಲಿದ್ದಾರೆ.

ಪ್ರಶಾಂತ್ ನೀಲ್ ಇಷ್ಟು ಎತ್ತರಕ್ಕೆ ಬೆಳೆದ ಮೇಲೂ ಆವತ್ತು ತನ್ನನ್ನ ಪ್ರೋತ್ಸಾಹಿಸಿದ ದರ್ಶನ್​ರನ್ನ ನೆನೆದಿದ್ದಾರೆ. ಅಂತೆಯೇ ದಚ್ಚು ಫ್ಯಾನ್ಸ್ ನೀಲ್​ರನ್ನ ಕೊಂಡಾಡ್ತಾ ಇದ್ದಾರೆ. ಆದಷ್ಟು ಬೇಗ ನೀಲ್-ಡಿ ಬಾಸ್ ಕಾಂಬೋನಲ್ಲಿ ಸಿನಿಮಾವೊಂದು ಬರಲಿ ಅಂತ ಆಶಿಸ್ತಾ ಇದಾರೆ.

ಅಮೀತ್, ಫಿಲಂ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES