Monday, December 23, 2024

ಗೂಗಲ್ ಸಹಾಯದಿಂದ ಊರು ಸೇರಿದ ಅಜ್ಜಿ!

ಬಾಗಲಕೋಟೆ: ಬಾಗಲಕೋಟೆಯ ಚಿತ್ರಬಾನುಕೋಟೆ ಗ್ರಾಮದ ಅಜ್ಜಿ ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದಲ್ಲಿ ತಮ್ಮವರಿಂದ ತಪ್ಪಿಸಿಕೊಂಡಿದ್ದು, ಕೊನೆಗೂ ತನ್ನೂರು ಸೇರಿದ್ದಾರೆ.

ತಾಯವ್ವ ಎಂಬ ಅಜ್ಜಿ ಕಬ್ಬು ಕಟಾವು ಮಾಡುವವರ ಜೊತೆ ಮಧ್ಯಪ್ರದೇಶಕ್ಕೆ ತೆರಳಿದ್ದರು. ಆದರೆ, ಅಲ್ಲಿ ದಾರಿ ತಿಳಿಯದೇ ತಮ್ಮವರಿಂದ ತಪ್ಪಿಸಿಕೊಂಡಿದ್ದಾರೆ.​ ಪರಿಚಿತರಿಲ್ಲದೆ ಮಧ್ಯಪ್ರದೇಶದ ರಸ್ತೆಗಳಲ್ಲಿ ಅಲೆದಾಡುತ್ತಿದ್ದರು. ಬಳಿಕ ಅಲ್ಲಿನ ಪೊಲೀಸ್​ ಅಧಿಕಾರಿಗಳು ಅಜ್ಜಿ ಹೇಳಿದ ಕನ್ನಡ ಪದಗಳನ್ನು ಗೂಗಲ್​ನಲ್ಲಿ ಸರ್ಚ್​​ ಮಾಡಿ ಬಳಿಕ ಬಾಗಲಕೋಟೆಯ ಸಖಿ ಕೇಂದ್ರ ಸಂಪರ್ಕಿಸಿದ ಅಧಿಕಾರಿಗಳು ಅಜ್ಜಿಯನ್ನು ವಾಪಸ್​ ಕಳಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರೀತಿ ಅಂಜನಾದ್ರಿ ಅಭಿವೃದ್ಧಿಪಡಿಸುವೆ: ಗಾಲಿ ಜನಾರ್ಧನ್​ ರೆಡ್ಡಿ!

ಪೊಲೀಸರ ಮತ್ತು ಸಖಿಕೇಂದ್ರದ ಅಧಿಕಾರಿಗಳ ಸಹಾಯದಿಂದ ಅಜ್ಜಿ ತನ್ನೂರಾದ ಬಾಗಲಕೋಟೆಯ ಚಿತ್ರಬಾನುಕೋಟೆ ಗ್ರಾಮ ಸೇರಿದ್ದು ಅಧಿಕಾರಿಗಳಿಗೆ ಧನ್ಯವಾದವನ್ನು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES