Sunday, January 5, 2025

Labourers Death: ಸಂಪ್‌ ಕ್ಲೀನ್‌ ಮಾಡಲು ಇಳಿದ ಇಬ್ಬರು ಕಾರ್ಮಿಕರು ಸಾವು

ಪರಪ್ಪನ ಅಗ್ರಹಾರ: ನೀರಿನ ತೊಟ್ಟಿ ಕ್ಲೀನ್‌ ಮಾಡಲು ಇಳಿದ ವೇಳೆ ಉಸಿರುಗಟ್ಟಿ ಇಬ್ಬರು ಕಾರ್ಮಿಕರು  ಸಾವಿಗೀಡಾಗಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೆರಟೇನ ಅಗ್ರಹಾರದ ಶಾಹಿ ಗಾರ್ಮೆಂಟ್ಸ್‌ನಲ್ಲಿ ಘಟನೆ ನಡೆದಿದೆ.

ಮೃತರು ತಮಿಳುನಾಡು ಮೂಲದ ಶಶಿಕುಮಾರ್ (51) ಮತ್ತು ಆಂಧ್ರ ಮೂಲದ ಆನಂದ್ (41) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಸಂಪ್‌ ಕ್ಲೀನ್‌ ಮಾಡಲು ಇಳಿದ ಇಬ್ಬರು ಕಾರ್ಮಿಕರು ಸಾವು

ಇವರಿಬ್ಬರೂ ಸಂಜೆ ಶಾಹಿ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಸಂಪ್‌ ಕ್ಲೀನ್ ಮಾಡಲು ಇಳಿದಿದ್ದರು. ಈ ವೇಳೆ ಉಸಿರುಗಟ್ಟಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

 

RELATED ARTICLES

Related Articles

TRENDING ARTICLES