ಶಿವಮೊಗ್ಗ: ಶಾಲೆಗಳಲ್ಲಿ ಇನ್ಮುಂದೆ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುವಂತಿಲ್ಲ. ಮುಂದಿನ ವರ್ಷದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಇಂದು ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಯಾವುದೇ ಶಿಕ್ಷಣ ಸಂಸ್ಥೆಯಲ್ಲೂ ಮಕ್ಕಳ ಕೈಯಲ್ಲಿ ಶೌಚ ಸ್ವಚ್ಚತೆ ಮಾಡಿಸುವಂತಿಲ್ಲ. ಹಾಗೆ ಮಾಡಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅಲ್ಲದೇ ಇನ್ಮುಂದೆ ಶಾಲಾ ಸ್ವಚ್ಚತೆಗೆ ಹೆಚ್ಚಿನ ಹಣ ಮೀಸಲಿಡುತ್ತೇವೆ. ಇನ್ನು ಎಲ್ಲಾ ಶಾಲೆಯಲ್ಲೂ ಮುಂದಿನ ವರ್ಷದಿಂದ ಮಕ್ಕಳು ನೆಲದ ಮೇಲೆ ಕೂಳಿತು ಪಾಠ ಕೇಳುವಂತಿಲ್ಲ.
ಇದನ್ನೂ ಓದಿ: ಅಯೋಧ್ಯೆ ರೀತಿ ಅಂಜನಾದ್ರಿ ಅಭಿವೃದ್ಧಿಪಡಿಸುವೆ: ಗಾಲಿ ಜನಾರ್ಧನ್ ರೆಡ್ಡಿ!
1 ರಿಂದ 10ನೇ ತರಗತಿ ವರೆಗೆ ಮಕ್ಕಳು ತರಗತಿಗಳಲ್ಲಿ ಬೆಂಚ್ ಮೇಲೆಯೇ ಕುಳಿತು ಪಾಠ ಕೇಳಬೇಕು. ಶಿಕ್ಷಣ ಇಲಾಖೆಯ ಆದೇಶ ಹೊರಡಿಸಿದೆ ಮುಂದಿನ ವರ್ಷದಿಂದಲೇ ಇದು ಜಾರಿಗೆ ಬರಲಿದೆ ಎಂದರು.