Thursday, December 19, 2024

ಇಂದು ವೀರಶೈವ ಲಿಂಗಾಯತ 24ನೇ ಮಹಾಧಿವೇಶನ!

ದಾವಣಗೆರೆ: ಇಂದು ಬೆಣ್ಣೆನಗರಿ ದಾವಣಗೆರೆಯಲ್ಲಿ 24ನೇ ವೀರಶೈವ ಲಿಂಗಾಯತರ ಅಧಿವೇಶ ನಡೆಯಲಿದೆ. ದಾವಣಗೆರೆ ನಗರದ ಎಂಬಿಎ ಕಾಲೇಜು ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗಿದೆ. ರಾಜ್ಯದ ವಿವಿಧೆಡೆಯಿಂದ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಬರುವ ನಿರೀಕ್ಷೆ ಇದೆ.

ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಇಂದು ಮಹಾ ಅಧಿವೇಶನ ನಡೆಯಲಿದ್ದು ಪಕ್ಷಾತೀತವಾಗಿ ರಾಜ್ಯ ಲಿಂಗಾಯತ ನಾಯಕರುಗಳು ಈ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ, ಇನ್ನೂ ಈ ಕಾರ್ಯಕ್ರವನ್ನು ಸುತ್ತೂರು ಮಠದ ಶ್ರೀಗಳು ಮಹಾ ಅಧಿವೇಶನ ಉದ್ಘಾಟನೆ ಮಾಡಲಿದ್ದಾರೆ.

ಇದನ್ನೂ ಓದಿ: ಹಿಜಾಬ್ ನಿಷೇಧ ವಾಪಸ್ ಹಿಂದೆ ಸಿಎಂ ಕುತಂತ್ರ ಅಡಗಿದೆ: ಆ‌ರ್. ಅಶೋಕ್

ನಾಡಿನ ವಿವಿಧ ಮಠಗಳ ಮಠಾಧೀಶರು ಭಾಗಿಯಾಗಲಿರುವ ಈ ಅಧಿವೇಶನದಲ್ಲಿ ಲಿಂಗಾಯತರ ಹಲವು ಬೇಡಿಕೆಗಳು ಹಾಗೂ ವಿಷಯಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಕೇಂದ್ರದ OBC ಪಟ್ಟಿಗೆ ಸರ್ವ ಲಿಂಗಾತರರು ಸೇರ್ಪಡೆ ಹಾಗೂ ಜಾತಿ ಗಣತಿ ವರದಿ ಬಿಡುಗಡೆಗೆ ವಿರೋಧ ವಿಚಾರ ಕುರಿತು ಚರ್ಚೆ ನಡೆಯಲಿದೆ. ದಾವಣಗೆರೆಯಲ್ಲಿ ಎರಡು ದಿನಗಳ ಕಾಲ ಮಹಾ ಅಧಿವೇಶನ ನಡೆಯಲಿದೆ.

RELATED ARTICLES

Related Articles

TRENDING ARTICLES