Wednesday, January 22, 2025

ಹಿಜಾಬ್ ವಿಚಾರ ಸಿದ್ದರಾಮಯ್ಯರದ್ದು ಬೇಜವಾಬ್ದಾರಿ ಹೇಳಿಕೆ : ಬಿವೈ ವಿಜಯೇಂದ್ರ ಕಿಡಿ!

ದೆಹಲಿ: ಹಿಜಾಬ್​ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಬೈ. ವಿಜಯೇಂದ್ರ ಕಿಡಿಕಾರಿದರು.

ಈ ಕುರಿತು ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಿನ್ನೆ ಸಿಎಂ ಸಿದ್ದರಾಮಯ್ಯ ಬೇಜವಬ್ದಾರಿ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಹಿಜಾಬ್ ರದ್ದತಿ ಆದೇಶ ವಾಪಸ್‌ ವಿಚಾರ
ಮತ್ತೆ ರಾಜ್ಯದಲ್ಲಿ ಹಿಜಾಬ್ ಗೆ ಅವಕಾಶ ನೀಡೊದಾಗಿ ಹೇಳಿ ಶಿಕ್ಷಣವನ್ನ ಕಲುಷಿತ ಮಾಡೊದಕ್ಕೆ ಸಿಎಂ ಕೈಹಾಕಿರೋದು ದುರಾದೃಷ್ಟಕರ, ಶಾಲೆಗೆ ಹೋಗುವ ಮಕ್ಕಳನ್ನಾದ್ರು ರಾಜಕೀಯದಲ್ಲಿ ಬಳಕೆ ಮಾಡಿಕೊಳ್ಳೊದ್ರಿಂದ ದೂರ ಇಡಬಹುದಾಗಿತ್ತು ಎಂದರು.

ಇದನ್ನೂ ಓದಿ: ರಾಜಕೀಯ ಲಾಭಕ್ಕಾಗಿ ಹಿಜಾಬ್ ಪ್ರಸ್ತಾಪ ಖಂಡನೀಯ : ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ಸರ್ಕಾರ ಕಲ್ಬುರ್ಗಿಯಲ್ಲಿ ತಾಳಿಯನ್ನ, ಕಾಲುಂಗರವನ್ನ ತೆಗೆಸಿದ್ದಾರೆ
ಇದನ್ನ ನಾವು ವಿರೋಧ ವ್ಯಕ್ತಪಡಿಸುತ್ತೇವೆ, ಇವತ್ತಿಗೂ ಶೇ50 ರಷ್ಟು ಅಲ್ಪಸಂಖ್ಯಾತರಿಗೆ ಶಿಕ್ಷಣದಿಂದ ವಂಚಿತರಾಗಿದ್ದಾರೆ ಇದಕ್ಕೆ ಕಾಂಗ್ರೆಸ್ ಪಕ್ಷವೆ ಕಾರಣ ತಾನೆ. ಶೇ 6೦ ರಷ್ಟು ಕೆಲಸವಿಲ್ಲದೆ ಬೇಜವಾಬ್ದಾರಿಯಿಂದ ಓಡಾಡೊದಕ್ಕೆ ಕಾಂಗ್ರೆಸ್ ಕಾರಣ, ಅಲ್ಪಸಂಖ್ಯಾತರನ್ನ ಕೇವಲ‌ ಓಟ್ ಬ್ಯಾಂಕ್ ಗಾಗಿ ಮಾತ್ರ ಬಳಕೆ ಮಾಡಿಕೊಂಡಿದ್ದಾರೆ.

ಪ್ರಧಾನಿ ಮೋದಿಯವರು ಅಲ್ಪಸಂಖ್ಯಾತ ಮಹಿಳೆರ ಪರವಾಗಿ ತ್ರಿಪಲ್‌ ತಲಾಕ್ ನಿಷೇಧ ಮಾಡಿದ್ದರು ಕಾಂಗ್ರೆಸ್ ನವರು ಏನ್ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES