Monday, December 23, 2024

‘ಕಾಟೇರ’ ಮುಂಗಡ ಬುಕ್ಕಿಂಗ್ ಓಪನ್ : ಮೊದಲ ಶೋ ಟಿಕೆಟ್ ಸೋಲ್ಡ್ಔಟ್..!

ಬೆಂಗಳೂರು : ‘ಕಾಟೇರ.. ಕಾಟೇರ.. ಕಾಟೇರ..’ ಪರಭಾಷೆ ಸಿನಿಮಾಗಳ ಹಾವಳಿಯ ನಡುವೆಯೂ ಡಿ ಬಾಸ್ ಹವಾ ಕಡಿಮೆ ಆಗಿಲ್ಲ. ನಟ ದರ್ಶನ್ ನಟನೆಯ ಕಾಟೇರ ಸಿನಿಮಾ ಎಲ್ಲೆಲ್ಲೂ ಸದ್ದು ಮಾಡುತ್ತಿದೆ.

ರಾಜ್ಯಾದ್ಯಂತ ‘ಜೈ ಡಿ ಬಾಸ್’ ಘೋಷಣೆ ಮೊಳಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ಅಭಿನಯದ ಈ ಅಪ್ಪಟ್ಟ ಕನ್ನಡ ಸೊಗಡಿನ ಸಿನಿಮಾ ಬಿಡುಗಡೆಗಾಗಿ ದಾಸನ ಭಕ್ತಗಣ ಕಾತುರದಿಂದ ಕಾಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಈ ಸಿನಿಮಾದ ಟಿಕೆಟ್ ಬುಕ್ಕಿಂಗ್ ಆರಂಭವಾಗಿರುವುದಾಗಿ ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

ಈ ಕುರಿತು ನಟ ದರ್ಶನ್ ತೂಗುದೀಪ, ಚಿತ್ರದ ನಿರ್ದೇಶಕ ತರುಣ್ ಸುಧೀರ್ ತಮ್ಮ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಕಾಟೇರ’ ಚಿತ್ರದ ಮುಂಗಡ ಬುಕ್ಕಿಂಗ್‌ಗಳು ಓಪನ್ ಆಗಿದೆ. ಪ್ರೇಕ್ಷಕರೇ, ನಿಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಿ ಹಾಗೂ ಡಿಸೆಂಬರ್ 29ರಿಂದ ತೆರೆಮೇಲೆ ‘ಕಾಟೇರ’ ಘರ್ಜನೆ ನೋಡಲು ಸಿದ್ಧರಾಗಿ ಎಂದು ತಮ್ಮ ಭಕ್ತಗಣಕ್ಕೆ ಸಿಹಿ ಸುದ್ದಿ ನೀಡಿದ್ದಾರೆ.

ಮೊದಲ ಶೋನ ಎಲ್ಲಾ ಟಿಕೆಟ್ ಸೋಲ್ಡ್​ಔಟ್​

ಇದೇ ಡಿಸೆಂಬರ್ 29ರಂದು ಕಾಟೇರ ಸಿನಿಮಾ ಬಿಡುಗಡೆಯಾಗಲಿದ್ದು, ರಾಜ್ಯ ಸೇರಿದಂತೆ ದೇಶಾದ್ಯಂತ ಭಾರಿ ಬೇಡಿಕೆ ವ್ಯಕ್ತವಾಗಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು ಅನುಪಮ ಚಿತ್ರಮಂದಿರದಲ್ಲಿ ಮೊದಲ ಶೋನ ಎಲ್ಲಾ ಟಿಕೆಟ್​ಗಳು ಸೋಲ್ಡ್​ಔಟ್​ ಆಗಿವೆ. ಪರಭಾಷೆಯ ಸಿನಿಮಾಗಳ ಅಬ್ಬರದ ನಡುವೆಯೂ ಕನ್ನಡ ಅಭಿಮಾನಿಗಳು ಮಾರುಕಟ್ಟೆಯಲ್ಲಿ ಮುಂಗಡ ಬುಕಿಂಗ್‌ಗಳನ್ನು ಮಾಡುತ್ತಿದ್ದಾರೆ.

‘ಕಾಟೇರ’ ಚಿತ್ರತಂಡ ಈಗಾಗಲೇ ಎರಡು ಹಾಡು ಹಾಗೂ ಟ್ರೈಲರ್​ ಬಿಡುಗಡೆ ಮಾಡಿದ್ದು, ಸಿನಿ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕಾಟೇರನಿಗೆ ನಾಯಕಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ಅಭಿನಯಿಸಿದ್ದಾರೆ. ರಾಕ್​ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ತರುಣ್ ಕಿಶೋರ್ ಸುಧೀರ್ ಮತ್ತೊಮ್ಮೆ ಡಿ ಬಾಸ್​ಗೆ ಆಕ್ಷನ್​ ಕಟ್ ಹೇಳಿದ್ದಾರೆ. ಇದೇ ಡಿಸೆಂಬರ್ 29ರಂದು ‘ಕಾಟೇರ’ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.

RELATED ARTICLES

Related Articles

TRENDING ARTICLES