ಬೆಳಗಾವಿ: ರಾಜ್ಯದಲ್ಲಿ ಹಿಜಬ್ ಧಾರಣೆ ನಿಷೇಧ ಹಿಂಪಡೆಯುತ್ತಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ಇದೀಗ ಮುಸ್ಲಿಂ ಪಾರ್ಟಿಯಾಗಿ ಮಾರ್ಪಟ್ಟಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಇದಕ್ಕಿಂತ ಭಿನ್ನವಾದ ನಿರೀಕ್ಷೆ ನಮಗಿರಲಿಲ್ಲ ಅವರಿಗೆ ಕಾನೂನಿನ ಮೇಲೆ ವಿಶ್ವಾಸ ಇಲ್ಲ, ಕಾನೂನು ಹೇಳಿದ್ದನ್ನು ಒಪ್ಪಿಕೊಳ್ಳುವ ದಾವಂತವೂ ಇಲ್ಲ, ಹೇಗಾದರೂ ಮಾಡಿ ಮುಸ್ಲಿಂ ಮತಗಳನ್ನು ತಮ್ಮತ್ತ ಸೇಳೆಯುವಂತೆ ಮಾಡುವುದೇ ಅವರ ತಂತ್ರ ಎಂದರು.
ಇದನ್ನೂ ಓದಿ: ಟಿಪ್ಪು ಸುಲ್ತಾನ್ ಎರಡನೇ ಅವತಾರವೇ ಸಿಎಂ ಸಿದ್ದರಾಮಯ್ಯ : ಯತ್ನಾಳ್
ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಒಂದು ಮುಸ್ಲಿಂ ಪಾರ್ಟಿಯಾಗಿದೆ, ನಾವು ಶಿಕ್ಷಣ ನೀತಿ ಸಮಾನತೆ ಇರಬೇಕೆಂದು ವಸ್ತ್ರ ಸಂಹಿತೆ ಜಾರಿ ಮಾಡಿದೆವು ಆದರೇ, ಹಿಜಾಬ್ ಹಾಕಿಕೊಂಡು ತಿರುಗುವುದನ್ನು ಪಿಎಫ್ಐ ನವರು ಮಾಡಿದರು, ಈಗ ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬಳಿಕ ಹಿಜಾಬ್ ನಿಷೇಧ ತೆರವು ಮಾಡಿದ್ದಾರೆ
ಬಹಳ ದುರಾದೃಷ್ಟಕರ ಸಂಗತಿ ಇದು ಎಂದರು.
ಪ್ರಧಾನಿ ನರೇಂದ್ರ ಮೋದಿ ಬಂದ ಬಳಿಕ ತ್ರಿಬಲ್ ತಲಾಕ್ ಹಿಂಪಡೆದರು, ಹಿಜಾಬ್ ತರಗತಿಯಲ್ಲಿ ಬೇಡ ಎಂದು ಹೇಳಿದರು, ಈಗ ಕಾಂಗ್ರೆಸ್ ಅವುಗಳನ್ನು ಜಾರಿಗೊಳಿಸಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷೆ ಕೊಡುತ್ತಿದ್ದಾರೆ, ಸಿಎಂ ಸಿದ್ದರಾಮಯ್ಯ ಮುಸ್ಲಿಂ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಇಂದು ಅವರು ಹೇಳಿಕೆ ನೀಡಿದರು.