ಕಲಬುರಗಿ: ಜಿಲ್ಲೆಯಲ್ಲಿ ಮತ್ತೆ ಪೊಲೀಸರ ಕಳ್ಳಾಟ ಬಯಲಾಗಿದೆ. ತಮ್ಮದೇ ಮಹಿಳಾ ಕಾನ್ಸ್‌ಟೇಬಲ್ ಮೊಬೈಲ್ ಕಾಲ್ CDRನ ಪೊಲೀಸರು ಮಾರಾಟ ಮಾಡಿರುವ ಘಟನೆ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮಹಿಳಾ ಸಿಬ್ಬಂದಿಯನ್ನ ಒನ್ ಸೈಡ್ ಲವ್ ಮಾಡ್ತಿದ್ದ ಕಳ್ಳನಿಗೆ ಪೊಲೀಸರು ಸಿಡಿಆರ್ ಮಾರಾಟ ಮಾಡಿದ್ದು, ಪ್ರತಿನಿತ್ಯ ಮಹಿಳಾ ಕಾನ್ಸ್‌ಟೇಬಲ್‌ಗೆ ಕಳ್ಳ ಮಹೇಶ್ ಮಾನಸಿಕ ಕಿರುಕುಳ ನೀಡಿದ್ದಾನೆ. ನನ್ನನ್ನ ಪ್ರೀತಿಸು ಎಂದು ಒತ್ತಾಯಿಸಿದ್ದಾನೆ. ಆದ್ರೆ ಇದಕ್ಕೆ ಕಾನ್ಸ್‌ಟೇಬಲ್ ಒಪ್ಪದಿದ್ದಕ್ಕೆ, ನಿಶ್ಚಿತಾರ್ಥ ಮಾಡಿಕೊಂಡಿರುವ ಯುವಕನಿಗೆ ಸಿಡಿಆರ್ ಕಳುಹಿಸಿದ್ದಾನೆ. ಇದರಿಂದ ಯುವಕ ಅನುಮಾನಗೊಂಡು ಮದುವೆಯನ್ನ ಕ್ಯಾನ್ಸಲ್ ಮಾಡಿದ್ದಾರೆ.
ಇದನ್ನೂ ಓದಿ: ಡಂಕಿ ಹೊಡೀತು ಡುಮ್ಕಿ, ಸಲಾರ್ ಗೆ ದಂಗಾದ ಪ್ರೇಕ್ಷಕ!
ಸದ್ಯ, ಈ ಬಗ್ಗೆ ಮಹಿಳಾ ಕಾನ್ಸ್‌ಟೇಬಲ್ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ್‌ಗೆ ದೂರು ನೀಡಿದ್ದು, ಹಿರಿಯ ಅಧಿಕಾರಿಗಳು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಿದ್ದಾರೆ.