Saturday, November 2, 2024

ಡಂಕಿ ಹೊಡೀತು ಡುಮ್ಕಿ, ಸಲಾರ್ ಗೆ ದಂಗಾದ ಪ್ರೇಕ್ಷಕ!

ಫಿಲ್ಮಿಡೆಸ್ಕ್: ಡಂಕಿ & ಸಲಾರ್​ ಕ್ಲ್ಯಾಶ್​ ಬಗ್ಗೆ ಕಳೆದ ಹಲವು ತಿಂಗಳಿಂದಲೂ ಸುದ್ದಿಯಾಗ್ತಾನೇ ಇತ್ತು. ಫೈನಲಿ ಗುರುವಾರ ಡಂಕಿ ತೆರೆಗೆ ಬಂದ್ರೆ ಶುಕ್ರವಾರ ಸಲಾರ್ ವರ್ಲ್ಡ್​​ವೈಡ್ ರಿಲೀಸ್ ಆಗಿದೆ. ಡಂಕಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ್ರೆ ಸಲಾರ್ ಥಿಯೇಟರ್​ ಅಂಗಳದಲ್ಲಿ ಉಗ್ರಾವತಾರ ಪ್ರದರ್ಶಿಸುತ್ತಿದೆ. ಸಲಾರ್ ಅಬ್ಬರ ಹೇಗಿದೆ ಅಂದ್ರೆ ಬಾಕ್ಸ್​​ಆಫೀಸ್​​ನಲ್ಲಿ ಹೊಸ ರೆಕಾರ್ಡ್​ ಸೃಷ್ಟಿಯಾಗೋದು ಫಿಕ್ಸ್​ ಅಂತಿದೆ ಮಾರ್ಕೆಟ್.

ಯೆಸ್, ಶಾರೂಖ್ ಖಾನ್ ನಟನೆ ನಿರ್ಮಾಣದ ಡಂಕಿ ಎದುರು ಸಲಾರ್ ಬರುತ್ತೆ ಅಂದಾಗ ಇದು ಇಂಡಿಯನ್ ಸಿನಿ ಇಂಡಸ್ಟ್ರಿಯ ಬಿಗ್ಗೆಸ್ಟ್ ಕ್ಲ್ಯಾಶ್ ಆಗುತ್ತೆ ಅಂತ ಎಲ್ಲರೂ ಊಹೆ ಮಾಡಿದ್ರು. ಎರಡೂ ಬಿಗ್ ಸ್ಟಾರ್​ ಗಳ ಬಿಗ್ ಸಿನಿಮಾಗಳೇ. ಡಂಕಿ ಗುರುವಾರದ ದಿನವೇ ತೆರೆಗೆ ಬಂದಿದೆ. ಪ್ರೇಕ್ಷಕರಿಂದ ಮೀಶ್ರ ಪ್ರತಿಕ್ರಿಯೆ ಗಳಿಸಿರೋ ಡಂಕಿ ಮೊದಲ ದಿನದ ಅಂತ್ಯಕ್ಕೆ ಡೊಮೆಸ್ಟಿಕ್ ಮಾರ್ಕೆಟ್​​ನಲ್ಲಿ 30 ಕೋಟಿ ಗಳಿಸಿದೆ.

ಇನ್ನೂ ಡಂಕಿಗೆ ಕಂಪೇರ್ ಮಾಡಿದ್ರೆ ಸಲಾರ್​ಗೆ ಬಿಗ್ಗೆಸ್ಟ್ ಓಪನಿಂಗ್ ಸಿಕ್ಕಿದೆ. ತೆಲುಗು ರಾಜ್ಯ​ಗಳಲ್ಲಿ ಮತ್ತು ಉತ್ತರ ಭಾರತದಲ್ಲಂತೂ ಸಲಾರ್ ನ ಪ್ರೇಕ್ಷಕರು ಮುಗಿಬಿದ್ದು ನೋಡ್ತಾ ಇದ್ದಾರೆ. ಸದ್ಯದ ಬುಕ್ಕಿಂಗ್ ಲೆಕ್ಕಾಚಾರ ನೋಡ್ತಾ ಇದ್ರೆ ಮೊದಲ ದಿನದ ಅಂತ್ಯಕ್ಕೇನೇ ಸಲಾರ್​ ನೂರು ಕೋಟಿ ಗಡಿ ಮುಟ್ಟುವ ನಿರೀಕ್ಷೆ ಇದೆ.

ಇದನ್ನೂ ಓದಿ: ಸಿಎಂ ವಿರುದ್ದ ಸ‘ಮಜಾವಾದಿ’ ಸಿದ್ದರಾಮಯ್ಯನವರ ಜೀವನ’ ಎಂದು ಕಿಡಿ ಕಾರಿದ ಯತ್ನಾಳ್​!

ಅಲ್ಲಿಗೆ ವರ್ಷಾಂತ್ಯದ ಬಾಕ್ಸ್​ಆಫೀಸ್ ಸಮರದಲ್ಲಿ ಸಲಾರ್ ಗೆದ್ದು ಬೀಗಿದೆ. ಸ್ಕ್ರೀನ್​ಗಳ ವಿಚಾರದಲ್ಲಿ ರಾಜಕೀಯ ಮಾಡಿದ್ರೂ ಡಂಕಿ ಡುಮ್ಕಿ ಹೊಡೆದಿದೆ. ಹಿಂದಿ ರಾಜ್ಯಗಳಲ್ಲೂ ಡಂಕಿಗಿಂತ ಸಲಾರ್​ಗೆ ಹೆಚ್ಚು ಕಲೆಕ್ಷನ್ ಆಗ್ತಿದೆ.

ಸಲಾರ್ ಸಿನಿಮಾ ಇಬ್ಬರು ಸ್ನೇಹಿತರ ಕಥೆ. ಹಿಂಸೆಯನ್ನ ತೊರೆದು ಮೆಕಾನಿಕ್ ಆಗಿ ಮೌನವಾಗಿ ನಟ್ಟು ಬೋಲ್ಟು ತಿರುಗಿಸ್ತಾ ಇದ್ದ ನಾಯಕ, ಮತ್ತೆ ಆ ಹಿಂಸೆಯ ಪ್ರಪಂಚಕ್ಕೆ ಎಂಟ್ರಿ ಕೊಡುವ ಕಥೆ. ಈ ಸ್ಟೋರಿ ಕೇಳುತ್ತಲೇ ಇದು ಉಗ್ರಂ ಕಥೆ ಅಲ್ವಾ ಅಂತ ಕೇಳಲೇಬೇಡಿ. ಅಫ್​ಕೋರ್ಸ್​​ ಇದು ಉಗ್ರಂ ಕಥೆಯೇ. ಖುದ್ದು ಪ್ರಶಾಂತ್ ನೀಲ್ ಇದನ್ನ ಒಪ್ಪಿಕೊಂಡಿದ್ದು, ಮತ್ತು ಇದೇ ಕಥೆಯನ್ನ ಸಲಾರ್ ಆಗಿಸಿದ್ದು ಯಾಕೆ ಅನ್ನೋ ಸೀಕ್ರೆಟ್​​ನೂ ತೆರೆದಿಟ್ಟಿದ್ದಾರೆ.

ಹೌದು ಉಗ್ರಂ ಸಿನಿಮಾವನ್ನ ಇಷ್ಟಪಟ್ಟು ಕಷ್ಟಪಟ್ಟು ಮಾಡಿದ್ದ ನೀಲ್​ಗೆ ಅಂದುಕೊಂಡ ಮಟ್ಟಕ್ಕೆ ಅದು ರೀಚ್ ಆಗಲಿಲ್ಲ ಅನ್ನೋ ಬೇಸರ ಇತ್ತು. ಅದ್ರಲ್ಲೂ ಉಗ್ರಂಗೆ ನಿರ್ಮಾಪಕನೂ ಆಗಿದ್ದ  ಪ್ರಶಾಂತ್ ನೀಲ್, ಚಿತ್ರದಿಂದಾಗಿ ಸಾಕಷ್ಟು ಸಾಲ ಸೋಲ ಕೂಡ ಮಾಡಿಕೊಂಡಿದ್ರಂತೆ.

ಉಗ್ರಂಗೆ ಮೆಚ್ಚುಗೆ ಸಿಕ್ರೂ ದೊಡ್ಡ ಮಟ್ಟದಲ್ಲಿ ರೀಚ್ ಆಗಲಿಲ್ಲ. ಆದ್ರೆ ಕೆಜಿಎಫ್ ಬಳಿಕ ದೊಡ್ಡ ಕ್ಯಾನ್ವಾಸ್​​ನಲ್ಲಿ ಉಗ್ರಂ ಕಥೆಯನ್ನ ನೀಲ್ ಹೇಳಬಯಸಿದ್ರಂತೆ. ಅದಕ್ಕೆ ಹೊಂಬಾಳೆ ಫಿಲಂಸ್ ಸಾಥ್ ಕೊಟ್ಟಿದೆ. ನೀಲ್ ಕಲ್ಪನೆಯ ದೇವ ಆಗಿ ಪ್ರಭಾಸ್ ಅಬ್ಬರಿಸಿದ್ದಾರೆ.

ಸಾಲು ಸಾಲು ಸೋಲಿನ ಸುಳಿಗೆ ಸಿಲುಕಿದ್ದ ಪ್ರಭಾಸ್​​ ಸಲಾರ್​ ಮೂಲಕ ಮತ್ತೆ ಫಾರ್ಮ್​​ಗೆ ಬಂದಿದ್ದಾರೆ. ಡಾರ್ಲಿಂಗ್ ಫ್ಯಾನ್ಸ್​ ಅಂತೂ ಪ್ರಭಾಸ್ ಉಗ್ರಾವತಾರ ನೋಡಿ ಫುಲ್ ಖುಷ್ ಆಗಿದ್ದಾರೆ. ಇಂಥದ್ದೊಂದು ಸಿನಿಮಾಕ್ಕೇನೇ ಕಾಯ್ತಾ ಇದ್ವಿ ಅಂತ ಸಲಾರ್​​ನ ಸಂಭ್ರಮಿಸ್ತಾ ಇದ್ದಾರೆ.

ಪ್ರಭಾಸ್ ಜೊತೆ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಕೂಡ ಸಿನಿಮಾದಲ್ಲಿ ಸಖತ್ ಸ್ಕೋರ್ ಮಾಡಿದ್ದಾರೆ. ಇನ್ನೂ ದೇವರಾಜ್, ಪ್ರಮೋದ್, ಮಧು ಗುರುಸ್ವಾಮಿ, ನವೀನ್ ಶಂಕರ್, ರವಿ ಭಟ್, ಭಜರಂಗಿ ಲೋಕಿ, ಗರುಡಾ ರಾಮ್  ಸೇರಿದಂತೆ ಸಲಾರ್​ನಲ್ಲಿ ಹಲವು ಕನ್ನಡ ಕಲಾವಿದರು ಅಬ್ಬರಿಸಿದ್ದಾರೆ.

ಇನ್ನೂ ಸಲಾರ್ ತಂತ್ರಜ್ಞರಂತೂ ಕೆಜಿಎಫ್ ಅಖಾಡದ ಕನ್ನಡಿಗರೇ. ಒಟ್ಟಾರೆ ಡಂಕಿ ನಂಥಾ ಬಾಲಿವುಡ್​​ನ ಬಿಗ್ ಸಿನಿಮಾದೆದ್ರು ಮತ್ತೊಮ್ಮೆ ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಗೆದ್ದುಬೀಗಿದೆ. ಸದ್ಯದ ಟ್ರೇಡ್ ಲೆಕ್ಕಾಚಾರ ನೋಡ್ತಿದ್ರೆ ಸಲಾರ್​ ಗಳಿಕೆಯಲ್ಲಿ ಹೊಸ ದಾಖಲೆ ನಿರ್ಮಿಸೋದಂತೂ ಫಿಕ್ಸ್ ಅಂತಿದಾರೆ ಬಾಕ್ಸ್​ ಆಫೀಸ್ ಪಂಡಿತರು.

ಅಮೀತ್, ಫಿಲಂ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES