Wednesday, January 22, 2025

Winter Food: ಚಳಿಗಾಲದಲ್ಲಿ ಯಾವೆಲ್ಲಾ ಆಹಾರಗಳನ್ನು ಸೇವಿಸಬೇಕು? ಇಲ್ಲಿದೆ ಮಾಹಿತಿ

ಚಳಿಗಾಲದಲ್ಲಿ ನಾವು ನಿತ್ಯ ಸೇವನೆ ಮಾಡುವ ಆಹಾರದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಹವಾಮಾನ ಬದಲಾದಂತೆ,ನಮ್ಮ ದೇಹ ಬದಲಾವಣೆಗಳಿಗೆ ಒಗ್ಗಬೇಕಿರುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ನಾವು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತೇವೆ. ಆದ್ದರಿಂದ ಈ ಸಮಯದಲ್ಲಿ ನಾವು ಸೇವಿಸುವ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಿದೆ.

ಭಾನುವಾರ 

ಬ್ರೇಕ್‌ಫಾಸ್ಟ್‌: ಡ್ರೈ ಫ್ರೂಟ್ಸ್‌ ಹಾಗೂ ತುಪ್ಪದಿಂದ ತಯಾರಿಸಿದ ಸಿಹಿ ಪೊಂಗಲ್‌. ಇದರಲ್ಲಿ ವಿಟಮಿನ್‌ ಬಿ2, ವಿಟಮಿನ್‌ ಇ, ಮೆಗ್ನೀಷಿಯಂ ಅಂಶಗಳಿವೆ.

ಮಧ್ಯಾಹ್ನದ ಊಟ: ಜೋಳದ ರೊಟ್ಟಿ, ಸಾಸಿವೆ ಸೊಪ್ಪು-ಪಾಲಕ್‌ ಸೊಪ್ಪಿನ ಗೊಜ್ಜು

ರಾತ್ರಿ ಊಟ: ಕಾಳುಗಳಿಂದ ತಯಾರಿಸಿದ ಕರಿ, ಅನ್ನ

ಸೋಮವಾರ

ಬ್ರೇಕ್‌ಫಾಸ್ಟ್‌: ಫ್ರೆಶ್‌ ಹಣ್ಣುಗಳು, ಬಾದಾಮಿ ಸೇರಿಸಿ ತಯಾರಿಸದಲಾದ ಓಟ್ಸ್.‌ ಇದರಲ್ಲಿ ಹೆಚ್ಚಿನ ಫ್ರೋಟೀನ್‌, ನ್ಯೂಟ್ರಿಷಿಯನ್‌, ಫೈಬರ್‌ ಅಂಶಗಳಿದ್ದು ಸುಲಭವಾಗಿ ಜೀರ್ಣವಾಗುತ್ತದೆ.

ಮಧ್ಯಾಹ್ನದ ಊಟ: ಚಪಾತಿ, ಚಿಕನ್‌ ಕರಿ

ರಾತ್ರಿ ಊಟ: ಬಾಜ್ರಾ ರೊಟ್ಟಿ ಹಾಗೂ ದಾಲ್‌

ಮಂಗಳವಾರ

ಬ್ರೇಕ್‌ಫಾಸ್ಟ್‌: ಮನೆಯಲ್ಲೇ ತಯಾರಿಸಿದ ಮುಸೆಲಿ ಅಥವಾ ಪಾಲಕ್‌ ಪರಾಟ

ಮಧ್ಯಾಹ್ನದ ಊಟ : ತರಕಾರಿ ಸಾಂಬಾರ್‌ ಹಾಗೂ ಅನ್ನ. ನಿಮಗೇನಾದರೂ ಸಿಹಿ ತಿನ್ನಬೇಕು ಎನಿಸಿದರೆ ಕ್ಯಾರೆಟ್‌ ಹಲ್ವಾ ಸೇವಿಸಬಹುದು.

ರಾತ್ರಿ: ಹೆಸರು ಬೇಳೆ ಕಿಚಡಿ

ಬುಧವಾರ

ಬ್ರೇಕ್‌ಫಾಸ್ಟ್‌: ಗೋಧಿ ಗಂಜಿ ಇದಕ್ಕೆ ನೀವು ಬೆಲ್ಲ ಅಥವಾ ಉಪ್ಪು ಏನಾದರೂ ಸೇರಿಸಿ ತಿನ್ನಬಹುದು. ಇದರೊಂದಿಗೆ ನೀವು ವಿವಿಧ ಡ್ರೈ ಫ್ರೂಟ್ಸ್‌ ಸೇವಿಸಬಹುದು.

ಮಧ್ಯಾಹ್ನದ ಊಟ: ಅನ್ನ ಹಾಗೂ ಚಿಕನ್‌ ಕರಿ

ರಾತ್ರಿ ಊಟ: ತರಕಾರಿ ಸೂಪ್‌

ಗುರುವಾರ

ಬ್ರೇಕ್‌ಫಾಸ್ಟ್‌: ತರಕಾರಿ ಉಪ್ಪಿಟ್ಟು. ನೀವು ಯಾವುದೇ ರೀತಿಯ ತರಕಾರಿಯನ್ನು ಬಳಸಬಹುದು.

ಮಧ್ಯಾಹ್ನದ ಊಟ: ಅನ್ನ ಹಾಗೂ ಪನೀರ್‌ ಕರಿ. ಊಟದ ರುಚಿಯನ್ನು ಹೆಚ್ಚಿಸಲು ಒಂದು ಚಮಚ ತುಪ್ಪ ಅಥವಾ ಬೆಣ್ಣೆ ಸೇರಿಸಿ.

ರಾತ್ರಿ ಊಟ: ಆಲೂ ಪರಾಟ

ಶುಕ್ರವಾರ

ಬ್ರೇಕ್‌ಫಾಸ್ಟ್‌: ಮೆಂತ್ಯ ಪರಾಟ. ಇದನ್ನು ನೀವು ತುಪ್ಪ ಅಥವಾ ಬೆಣ್ಣೆ ಜೊತೆ ಸೇವಿಸಬಹುದು.

ಮಧ್ಯಾಹ್ನದ ಊಟ: ಗೋಧಿಯಿಂದ ತಯಾರಿಸಿದ ಯಾವುದೇ ಆಹಾರ. ಜೊತೆಗೆ ತರಕಾರಿ ಸಲಾಡ್‌

ರಾತ್ರಿ ಊಟ: ಕಡ್ಲೆಹಿಟ್ಟಿನ ದೋಸೆ ( ಚೀಲಾ) ಹಾಗೂ ತರಕಾರಿ ಗೊಜ್ಜು

ಶನಿವಾರ

ಬ್ರೇಕ್‌ಫಾಸ್ಟ್‌: ಹೆಸರುಕಾಳಿನ ದೋಸೆ ಅಥವಾ ಅವಲಕ್ಕಿಯಿಂದ ತಯಾರಿಸಿದ ಆಹಾರ

ಮಧ್ಯಾಹ್ನ: ಕ್ರಿಸ್‌ಮಸ್‌ ಸ್ಪೆಷಲ್‌ ರಮ್‌ ಕೇಕ್‌ ಹಾಗೂ ಬಾದಾಮಿ

ರಾತ್ರಿ ಊಟ: ಅನ್ನ ಹಾಗೂ ಎಲ್ಲಾ ಕಾಳುಗಳನ್ನು ಬಳಸಿ ತಯಾರಿಸಲಾದ ದಾಲ್‌ ಕರಿ

RELATED ARTICLES

Related Articles

TRENDING ARTICLES