Friday, December 27, 2024

Road Accident: ಭೀಕರ ರಸ್ತೆ ಅಪಘಾತ, ಜೀಪಿಗೆ ಲಾರಿ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವು

ಕಲಬುರಗಿ: ಅಫಜಲಪುರ- ಕಲಬುರಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ 5 ಮಂದಿ ಮೃತಪಟ್ಟಿದ್ದಾರೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹೊರವಲಯದ ನೀರಾವರಿ ಕಚೇರಿ ಬಳಿ ದುರ್ಘಟನೆ ನಡೆದಿದೆ. ಲಾರಿ ಹಾಗೂ ಜೀಪ್ ನಡುವೆ ಡಿಕ್ಕಿ ಸಂಭವಿಸಿದ್ದು, ಜೀಪಿನಲ್ಲಿದ್ದ ಐವರು ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: Winter Food: ಚಳಿಗಾಲದಲ್ಲಿ ಯಾವೆಲ್ಲಾ ಆಹಾರಗಳನ್ನು ಸೇವಿಸಬೇಕು? ಇಲ್ಲಿದೆ ಮಾಹಿತಿ

ಮೃತ ದುರ್ದೈವಿಗಳನ್ನು ಸಂತೋಷ್(40), ಶಂಕರ್(55), ಸಿದ್ದಮ್ಮ(50), ಹುಚ್ಚಪ್ಪ(5), ಪೂಜಾ(30) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಅಫಜಲಪುರ ಮಾಡ್ಯಾಳ ಗ್ರಾಮದ ನಿವಾಸಿಗಳು. ಅಫಜಲಪುರ ಕಡೆಯಿಂದ ಮಲ್ಲಾಬಾದ್ ಕಡೆ ಇವರ ಕಮಾಂಡೋ ಜೀಪ್‌ ಹೊರಟಿತ್ತು.

ಕಲಬುರಗಿ ಕಡೆಯಿಂದ‌ ವೇಗವಾಗಿ ಬರುತ್ತಿದ್ದ ಲಾರಿಗೆ ಜೀಪು ಡಿಕ್ಕಿಯಾಗಿದೆ. ಜೀಪಿನಲ್ಲಿದ್ದವರೆಲ್ಲಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಫಜಲಪುರ ಪೊಲೀಸರು ಭೇಟಿ ನೀಡಿ ಪರೀಶೀಲಿಸಿದ್ದಾರೆ.

RELATED ARTICLES

Related Articles

TRENDING ARTICLES