Sunday, December 22, 2024

ನಟಿ ತಾರಾ ಫೇಸ್‍ಬುಕ್ ಅಕೌಂಟ್ ಹ್ಯಾಕ್

ಬೆಂಗಳೂರು: ಫೇಸ್‍ಬುಕ್ ಐಡಿ ಮೂಲಕ ಸ್ನೇಹಿತರಿಗೆ ಟ್ಯಾಗ್ ಮಾಡಿ ಅನಾವಶ್ಯಕ ಸಂದೇಶ ಕಳಿಸಿದ ಆರೋಪದ ಮೇಲೆ ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ ಅವರ ದಕ್ಷಿಣ ವಿಭಾಗ ಸೆನ್ ಠಾಣೆಗೆ ದೂರು ನೀಡಿದ್ದಾರೆ. 
ನಟಿ ತಾರಾನುರಾಧ ಹಾಗೂ ತಾರಾನುರಾಧ ವೇಣು ಎಂಬ ಎರಡು ಅಕೌಂಟ್‍ಗಳನ್ನು ಬಳಕೆ ಮಾಡುತ್ತಿದ್ದರು. ಇತ್ತೀಚೆಗೆ ಅವರು ಹೆಚ್ಚಾಗಿ ತಾರಾನುರಾಧ ವೇಣು ಎಂಬ ಅಕೌಂಟ್ ಬಳಸುತ್ತಿದ್ದರು.
ಈ ವೇಳೆ ಸ್ನೇಹಿತರೊಬ್ಬರು ತಾರಾಗೆ ಲಿಂಕ್ ಒಂದನ್ನ ಕಳುಹಿಸಿದ್ದಾರೆ. ಆಗ ವಿಚಾರ ಬಯಲಾಗಿದೆ. ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರೋ ಹಿರಿಯ ನಟಿ, ಕಾನೂನು ಮೂಲಕ ಕ್ರಮಕ್ಕೆ ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES