Wednesday, January 22, 2025

ಕ್ರಿಸ್ಮಸ್​ ಹಬ್ಬಕ್ಕೆ ಊರಿಗೆ ಹೊರಟವರಿಗೆ KSRTC ವತಿಯಿಂದ ಸಿಹಿಸುದ್ದಿ!

ಬೆಂಗಳೂರು: ಕ್ರಿಸ್‌ಮಸ್‌ ರಜೆಗೆ ಊರಿಗೆ ಹೊರಟಿರುವ ಪ್ರಯಾಣಿಕರಿಎ KSRTC ಸಿಹಿಸುದ್ದಿ ನೀಡಿದ್ದು ಪ್ರಯಾಣಿಕರ ಅನುಕೂಲಕ್ಕಾಗಿ ಒಂದು ಸಾವಿರ ಹೆಚ್ಚುವರಿ ಬಸ್ ಸೇವೆ ಕಲ್ಪಿಸಲಾಗಿದೆ.

ಡಿ.22ರಿಂದ ಡಿ.24ರ ವರೆಗೆ ಬೆಂಗಳೂರು ನಗರದ ವಿವಿಧ ಬಸ್ ನಿಲ್ದಾಣಗಳಿಂದ ಈ ಹೆಚ್ಚುವರಿ ಬಸ್ ಸೇವೆ ಒದಗಿಸಲಾಗುತ್ತಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಶೃಂಗೇರಿ, ಹೊರನಾಡು, ದಾವಣಗೆರೆ, ಗೋಕರ್ಣ, ಶಿರಸಿ, ರಾಯಚೂರು ಹಾಗೂ ತಿರುಪತಿಗೆ ತೆರಳಲಿವೆ. ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿಗೆ ಹೆಚ್ಚುವರಿ ಬಸ್ ಹೊರಡಲಿವೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್​​​​​​​​​​​​​ನಲ್ಲಿ ಮೆನು ಚೇಂಜ್​!

ಇನ್ನು, ಕ್ರಿಸ್ಮಸ್​ ಹಬ್ಬ ಆಚರಣೆ ಮತ್ತು ಹೊಸ ವರ್ಷದ ಸಂಭ್ರಕ್ಕೆ ಇನ್ನು, ಕೆಲವೇ ದಿನಗಳು ಬಾಕಿ ಇದೆ. ಈ ನಡುವೆ ಹಬ್ಬಕ್ಕೆ ಊರಿಗೆ ಹೊರಡುವವರ ಸಂಖ್ಯೆಯೂ ಹೆಚ್ಚಾಗಿಯೇ ಇರುವ ಕಾರಣ ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ಹೆಚ್ಚುವರಿ ಬಸ್​ ವ್ಯವಸ್ಥೆಯನ್ನು ಕಲ್ಪಿಸಿದೆ.

RELATED ARTICLES

Related Articles

TRENDING ARTICLES