Wednesday, January 22, 2025

ಪ್ರೇಮಿಗಳು ಪರಾರಿ​​​: ಯುವಕನ ತಂದೆ ಮೇಲೆ ಮಾರಣಾತಿಕ ಹಲ್ಲೆ!

ಬೆಳಗಾವಿ: ಯುವಕ-ಯುವತಿ ಮನೆ ಬಿಟ್ಟು ಓಡಿ ಹೋದ ಹಿನ್ನೆಲೆ ಯುವತಿ ಮನೆಯವರು ಯುವಕನ ಕುಟುಂಬಸ್ಥರ ಮೇಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಹಲ್ಲೆ ನಡೆಸಿದ್ದ 8 ಆರೋಪಿಗಳನ್ನು ಉದ್ಯಮಭಾಗ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ವಂಟಮೂರಿಯಲ್ಲಿ ನಡೆದ ಘಟನೆ ಮರುಕಳಿಸಿದೆ. ಪುಣೆ ಮೂಲದ ಯುವತಿ ಅಕ್ಷತಾಳನ್ನು ಪ್ರೀತಿಸಿ ಪ್ರಶೀಕ್ ಸಾವಳೆ ಮನೆಗೆ ಕರೆದುಕೊಂಡು ಬಂದಿದ್ದ. ಈ ಹಿನ್ನೆಲೆ ರೊಚ್ಚಿಗೆದ್ದ ಯುವತಿ ಕಡೆಯವರು ಯುವಕನ ತಂದೆ ರಮೇಶ ಸಾವಳೆ ಮೇಲೆ ಹಲ್ಲೆ ನಡೆಸಿದ್ದಾರೆ.ಹುಡುಗಿ ತಂದೆ ಸಂಜಯ್​ ಹಾಗೂ ಇತರರಿಂದ ಯುವಕನ ತಂದೆ ಮೇಲೆ ಹಲ್ಲೆ ನಡೆಸಲಾಗಿದೆ. ತಂದೆಯ ರಕ್ಷಣೆಗೆ ಹೋದ ಮತ್ತೋರ್ವ ಮಗ ರಾಹುಲ್ ಮೇಲೂ ಹಲ್ಲೆ ನಡೆಸಲಾಗಿದೆ.

ಇದನ್ನೂ ಓದಿ: ಇನ್ಮುಂದೆ ಸಾರಿಗೆ ಬಸ್ ನಲ್ಲಿ ಮಾಸ್ಕ್​ ಕಡ್ಡಾಯ: ಸಚಿವ ರಾಮಲಿಂಗಾರೆಡ್ಡಿ!

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ರಮೇಶ್​​​​​ ಹಾಗೂ ರಾಹುಲ್​ ಉದ್ಯಮಭಾಗ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Related Articles

TRENDING ARTICLES