Monday, December 23, 2024

ಇಂದಿನಿಂದ 3 ದಿನ ಹಲವೆಡೆ ವಿದ್ಯುತ್ ವ್ಯತ್ಯಯ!

ಬೆಂಗಳೂರು: ನಗರದ ಹಲವೆಡೆ ಇಂದಿನಿಂದ ಮೂರು ದಿನ ಪವರ್ ಕಟ್ ಇರಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ನಿರ್ವಹಣಾ ಕಾರ್ಯದಿಂದಾಗಿ ಮಂಗಳವಾರದಿಂದ ಗುರುವಾರದವರೆಗೆ ಹಲವೆಡೆ ವಿದ್ಯುತ್ ಕಡಿತವಾಗಲಿದೆ.

ಇದನ್ನೂ ಓದಿ: ಶಾಲಾ ಮಕ್ಕಳ ಪ್ಯಾಂಟ್ ಬಿಚ್ಚಿಸಿ​ ದೈಹಿಕ ಶಿಕ್ಷಕನಿಂದ ವಿಚಿತ್ರ ಪಾಠ!

ಲೈನ್ ನಿರ್ವಹಣೆ, ಡಿಟಿಸಿ ರಚನೆ ನಿರ್ವಹಣೆ, ಜಂಗಲ್ ಕ್ಲಿಯರೆನ್ಸ್, ನವೀಕರಣ, ಆಧುನೀಕರಣ, ರಿಂಗ್ ಮುಖ್ಯ ಘಟಕ ನಿರ್ವಹಣೆ, ಮರಗಳ ರೆಂಭೆ ಕೊಂಬೆ ಕತ್ತರಿಸುವ ಕಾರ್ಯ, ಜಲಸಿರಿ 24×7 ನೀರು ಸರಬರಾಜು ಕೆಲಸ, ಓವರ್‌ಹೆಡ್‌ನಿಂದ ಅಂಡರ್​ಗ್ರೌಂಡ್ ಕೇಬಲ್‌ಗಳನ್ನು ಬದಲಾಯಿಸುವುದು ಮತ್ತು ಕೇಬಲ್ ಹಾನಿ ಸರಿಪಡಿಸುವಿಕೆ ಇತ್ಯಾದಿಗಳನ್ನು ಒಳಗೊಂಡಿದೆ. ವಿದ್ಯುತ್ ಕಡಿತ ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ಇರಲಿದೆ.

ವಿದ್ಯುತ್ ಕಡಿತದ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು ವಿದ್ಯುತ್ ಅಡಚಣೆಗೆ ಸಹಕರಿಸುವಂತೆ ಕೋರಿದ್ದಾರೆ.

RELATED ARTICLES

Related Articles

TRENDING ARTICLES