Monday, December 23, 2024

ತಮ್ಮ ಹೆಸರು ಕೈ ಬಿಡುವಂತೆ ಕೋರಿ ಜಾಕ್ವೆಲಿನ್ ಕೋರ್ಟ್​ಗೆ ಅರ್ಜಿ!

ದೆಹಲಿ: ತಮ್ಮ ವಿರುದ್ದದ ಎಫ್​ಐಆರ್​ ರದ್ದು ಮಾಡಬೇಕು ಎಂದು ಕೋರಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್​ ದೆಹಲಿ ಹೈಕೋರ್ಟ್​ ಗೆ ಮಾಡಿಕೊಂಡಿದ್ದಾರೆ.

ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಸುಕೇಶ್​ ಚಂದ್ರಶೇಖರ್​ ಜೊತೆ ಸ್ನೇಹ ಬೆಳೆಸಿದ್ದರಿಂದ ಕಾನೂನಿನ ಸಂಕಷ್ಟ ಎದುರಾಗಿದೆ. ಸುಕೇಶ್​ ಮಾಡಿದ 200 ಕೋಟಿ ರೂ. ವಂಚನೆ ಕೇಸ್​ನಲ್ಲಿ ಜಾಕ್ವೆಲಿನ್​ ಕೂಡ ಭಾಗಿ ಆಗಿದ್ದರು ಎಂಬ ಅನುಮಾನ ಇದೆ. ಇದರ ವಿಚಾರಣೆ ನಡೆಸಿರುವ ಜಾರಿ ನಿರ್ದೇಶನಾಲಯವು ಎಫ್​ಐಆರ್​ನಲ್ಲಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರ ಹೆಸರನ್ನು ಸೇರಿಸಿದೆ.

ಇದನ್ನೂ ಓದಿ: IPL ಇತಿಹಾಸದಲ್ಲೇ ಮೊದಲ ಬಾರಿಗೆ ₹20.5 ಕೋಟಿಗೆ ಸೇಲಾದ ಪ್ಯಾಟ್ ಕಮ್ಮಿನ್ಸ್!

ಆದರೆ ತಮ್ಮ ವಿರುದ್ಧದ FIR​ ರದ್ದು ಮಾಡಬೇಕು ಎಂದು ಕೋರಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ‘ಸುಕೇಶ್​ ಚಂದ್ರಶೇಖರ್​ ಮಾಡಿದ ಕುತಂತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್​ ಸಂತ್ರಸ್ಥೆ ಆಗಿದ್ದಾರೆ. ವಂಚನೆಯಿಂದ ಹಣ ಗಳಿಸುವಲ್ಲಿ ಸುಕೇಶ್​ ಮಾಡಿದ ಅಪರಾಧಗಳಿಗೆ ಜಾಕ್ವೆಲಿನ್​ ಫರ್ನಾಂಡಿಸ್​ ಸಹಾಯ ಮಾಡಿಲ್ಲ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್​ 3 ಮತ್ತು 4ರಲ್ಲಿ ಅವರಿಗೆ ಶಿಕ್ಷೆ ಆಗಬಾರದು’ ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

RELATED ARTICLES

Related Articles

TRENDING ARTICLES