Wednesday, January 22, 2025

ಶಾಲಾ ಮಕ್ಕಳ ಪ್ಯಾಂಟ್ ಬಿಚ್ಚಿಸಿ​ ದೈಹಿಕ ಶಿಕ್ಷಕನಿಂದ ವಿಚಿತ್ರ ಪಾಠ!

ಬೀದರ್​ : ಶಾಲಾ ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿ ವಿಕೃತಿ ಮೆರೆಯುತ್ತಿದ್ದ ದೈಹಿಕ ಶಿಕ್ಷಕನ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.

ಬೀದರ್ ಜಿಲ್ಲೆಯ ಪ್ರೌಢಶಾಲಾ ದೈಹಿಕ ಶಿಕ್ಷಕ ರಮೇಶ್ ವಿರುದ್ದ ದೂರು ಕೇಳಿ ಬಂದಿದೆ. ಶಾಲೆಯಲ್ಲಿ ಪ್ರತಿನಿತ್ಯ 10ನೇ ತರಗತಿ ವಿದ್ಯಾರ್ಥಿಗಳ ಪ್ಯಾಂಟ್​ ಬಿಚ್ಚಿಸಿ ಶಾಲಾ ಮೈದಾನದಲ್ಲಿ ಓಡುವಂತೆ ಒತ್ತಾಯ ಮಾಡುವುದಲ್ಲದೇ ಪ್ಯಾಂಟ್​  ಜೊತೆಗೆ ಒಳ ಉಡುಪನ್ನು ಬಿಚ್ಚಿಸಿ ಪರಸ್ಪರ ಗುಪ್ತಾಂಗಗಳನ್ನು ಮುಟ್ಟಿಸಿ ಶಿಕ್ಷಕ ರಮೇಶ್​ ವಿಚಿತ್ರ ಪಾಠ ಹೇಳಿಕೊಡುತ್ತಿದ್ದ.

ಇದನ್ನೂ ಓದಿ: ಪರೀಕ್ಷೆ ಶುಲ್ಕ ಪಾವತಿಸದ್ದಕ್ಕೆ ಚಪ್ಪಲಿ ಬಿಡುವ ಜಾಗದಲ್ಲಿ ಮಕ್ಕಳನ್ನು ಕೂರಿಸಿ ಶಿಕ್ಷೆ!

ಸಂಜೆ ಶಾಲಾ ಬಿಡುವಿನ ನಂತರ ಮಕ್ಕಳಿಗೆ ವಿಚಿತ್ರ ಪಾಠ ಮಾಡಲು ಮುಂದಾಗುತ್ತಿದ್ದ ಶಿಕ್ಷಕ, ಹೇಳಿದ್ದನ್ನು ಮಾಡದಿದ್ದರೇ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹೊಡೆಯುವುದು ಮಾಡುತ್ತಿದ್ದ. ಸದ್ಯ ಶಿಕ್ಷಕನನ್ನು ವಶಕ್ಕೆ ಪಡೆದಿರುವ ಬೀದರ್ ಪೊಲೀಸರು ಆರೋಪಿ ವಿರುದ್ದ ಪೊಕ್ಸೋ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Related Articles

TRENDING ARTICLES