Wednesday, January 22, 2025

ಬೆಂಗಳೂರು ಮಾದರಿಯಲ್ಲಿ ತುಮಕೂರಿನ ವಾರ್ಡ್​ಗಳನ್ನು ಹೆಚ್ಚಿಸಲಾಗುವುದು : ಪರಮೇಶ್ವರ್

ತುಮಕೂರು : ತುಮಕೂರು ಬ‌ಹಳ‌ ವೇಗವಾಗಿ ಬೆಳೆಯುತ್ತಿದೆ. ಕಾರ್ಪೋರೇಷನ್ ಏರಿಯಾ ವಿಸ್ತರಿಸುತ್ತೇವೆ. ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಗೆ ವಿಸ್ತರಿಸಲು ಯೋಜನೆ ತಯಾರಿಸುವಂತೆ ಹೇಳಿದ್ದೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗ ಭೀಮಸಂದ್ರದವರೆಗೂ ವಾರ್ಡ್ ವ್ಯಾಪ್ತಿಯಿದೆ, ಅದನ್ನು ಮಲ್ಲಸಂದ್ರವರೆಗೂ ವಿಸ್ತರಿಸುತ್ತೇವೆ. ತುಮಕೂರು ಸುತ್ತಮುತ್ತಲ ಹಳ್ಳಿಗಳನ್ನು ಸೇರಿಸಿಕೊಂಡು ವಿಸ್ತರಣೆ ಮಾಡಲಾಗುವುದು. ಬೆಂಗಳೂರಿನ ಮಾದರಿಯಲ್ಲಿ ತುಮಕೂರಿನ ವಾರ್ಡ್ ಗಳನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ತುಮಕೂರು ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ ಅಧಿಕಾರ ಸ್ವೀಕಾರ ವಿಚಾರವಾಗಿ ಮಾತನಾಡಿ, ತುಮಕೂರಿಗೆ ನೂತನವಾಗಿ‌ ಜಿಲ್ಲಾಧಿಕಾರಿಯಾಗಿ ಬಂದಿರುವ ಶುಭ ಕಲ್ಯಾಣ್​ ಅವರಿಗೆ ಅನುಭವವಿದೆ. ಈ ಹಿಂದೆ ಜಿಲ್ಲಾ ಪಂಚಾಯಿತಿ ಸಿಇಓ ಆಗಿದ್ದರು. ಯಾವುದೇ ತೊಂದರೆ ಆಗಲ್ಲ. ಅಭಿವೃದ್ದಿ ಕೆಲಸ ಮುಂದುವರಿಸುತ್ತೇವೆ. ಸರ್ಕಾರ ಚಿಂತನೆ ಏನಿದೆ ಅದರ ಅಡಿಯಲ್ಲಿ ನಾವು ಹೋಗುತ್ತೇವೆ ಎಂದು ಹೇಳಿದರು.

ಡಿಸಿ ಖಾತೆಯಲ್ಲಿ 500 ಕೋಟಿ ಇಟ್ಟಿದ್ದೇವೆ

ಬರ‌ ನಿರ್ವಹಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು,ಬಿಜೆಪಿಯವರಿಗೆ ಮಾತನಾಡಲು ಬೇರೆ ವಿಚಾರಗಳಿಲ್ಲ. ಎಲ್ಲವನ್ನು ವಿವರಿಸಿದ್ದೇವೆ. ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಹೇಳಿದ್ದೇವೆ. ಈಗಾಗಲೇ ಸದನದಲ್ಲಿ ಉತ್ತರ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದಿಂದ ಬರಬೇಕಾದ ಹಣ ಒಂದು ರೂಪಾಯಿ ಬಂದಿಲ್ಲ.‌ ನೀವೇನು ಖರ್ಚು ಮಾಡಿದ್ದೀರಾ ಅಂತ ಹೇಳ್ತಿದ್ದಾರೆ. ಜಿಲ್ಲಾಧಿಕಾರಿಗಳ ಅಕೌಂಟ್ ನಲ್ಲಿ ಸುಮಾರು 500 ಕೋಟಿ ಹಣ ಇಟ್ಟಿದ್ದೇವೆ. ನಮ್ಮ ಜಿಲ್ಲೆಯ ಡಿಸಿ ಅಕೌಂಟ್ ನಲ್ಲಿ 30 ಕೋಟಿ ರೂಪಾಯಿ ಹಣ ವಿದೆ. ಏಮರ್ಜೆನ್ಸಿ ಇದ್ರೆ, ಜನರಿಗೆ ತೊಂದರೆ ಆದ್ರೆ ಖರ್ಚು ಮಾಡಿ ಅಂತ ಹಣವಿಟ್ಟಿದ್ದೇವೆ. ರಾಜಕೀಯ ಕಾರಣಕ್ಕಾಗಿ ಇಲ್ಲ ಸಲ್ಲದ ಅಪಾಧನೆಗಳನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿಗರಿಗೆ ಪರಮೇಶ್ವರ್ ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES