Wednesday, January 22, 2025

3ನೇ ದಿನವೂ ಪವರ್ ‘ಫರ್ನಿಚರ್ ಎಕ್ಸ್​ಪೋ’ಗೆ ಸಖತ್ ರೆಸ್ಪಾನ್ಸ್ : ಶೇ.70 ರಷ್ಟು ರಿಯಾಯಿತಿ

ಬೆಂಗಳೂರು : ಜೆ.ಪಿ ನಗರದ ಶುಭ್ ಕನ್ವೆನ್ಷನ್ ಸೆಂಟರ್‌ನಲ್ಲಿ ಪವರ್ ಟಿವಿ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿರುವ ‘ಫರ್ನಿಚರ್ ಎಕ್ಸ್‌ಪೋ’ಗೆ ಮೂರನೇ ದಿನವೂ ಸಖತ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ.

ಒಂದೆಡೆ ಐಷಾರಾಮಿ ಪೀಠೋಪಕರಣಗಳು. ಮತ್ತೊಂದು ಕಡೆ ಎಲ್ಲರನ್ನೂ ಅಟ್ರ್ಯಾಕ್ಟ್ ಮಾಡೋ ಡೈನಿಂಗ್ ಟೇಬಲ್, ಫುಲ್ ಭರ್ಜರಿಯಾಗಿ ಕಾಣೋ ಸೋಫಾಗಳು. ತರಹೇವಾರಿ ಚಿತ್ತಾಕರ್ಷಕ ವುಡ್ ವರ್ಕ್. ಹೋಮ್ ಡೆಕೋರ್, ಕಾರ್ಪೆಟ್, ವಾಲ್ ಪೇಪರ್, ದಿನ ಬಳಕೆ ವಸ್ತುಗಳಿಗೆ ಗ್ರಾಹಕರು ಫುಲ್ ಫಿದಾ ಆಗಿದ್ದಾರೆ. ನಾ ಮುಂದು ತಾ ಮುಂದು ಅಂತಾ ಖರೀದಿಗೆ ಮುಂದಾಗಿದ್ದಾರೆ.

ಎಕ್ಸ್‌ಪೋಗೆ ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಭಾಗಿಯಾದ್ದು, ತಮ್ಮ ಮನೆಗೆ ಹೊಂದಿಕೊಳ್ಳುವ ಆಕರ್ಷಕ ಪೀಠೋಪಕರಣಗಳು ಸೇರಿ ಹಲವು ವಸ್ತುಗಳನ್ನು ಖರೀದಿ ಮಾಡಿಕೊಂಡರು. ಕೆಲವು ಸ್ಟಾಲ್‌ಗಳಲ್ಲಿ 40% ಆಫರ್ ಇದ್ರೆ, ಇನ್ನೂ ಕೆಲವು ಕಡೆ 60 ರಿಂದ 70% ಆಫರ್ ಇತ್ತು. ಹೀಗಾಗಿ, ಜನ ಈ ಸುವರ್ಣವಕಾಶವನ್ನು ಮಿಸ್ ಮಾಡಿಕೊಳ್ಳಬಾರದು ಅಂತ ಪರ್ನಿಚರ್‌ಗಳನ್ನ ಬುಕ್ ಮಾಡಿದರು.

ಸಿಂಗಾಪುರ, ದುಬೈ ಕಡೆಗೆ ಎಕ್ಸ್‌ಪೋರ್ಟ್

ಇನ್ನೂ, ಈ ಎಕ್ಸ್‌ಪೋದಲ್ಲಿ 1000 ದಿಂದ 10 ಲಕ್ಷದ ವರೆಗೆ ವಸ್ತುಗಳು ಸಿಗುತ್ತಿವೆ. ಮತ್ತೊಂದು ಸ್ಪೆಷಾಲಿಟಿ ಎಂದರೆ ಮಲೇಷಿಯಾ, ಸಿಂಗಾಪುರ, ದುಬೈ ಕಡೆಗೆ ಎಕ್ಸ್‌ಪೋರ್ಟ್ ಆಗುವಂತಹ ವಸ್ತುಗಳನ್ನು ಕೂಡ ಎಕ್ಸ್‌ಪೋದಲ್ಲಿ ಮಾರಾಟ ಮಾಡಲಾಗುತ್ತಿದೆ. ವೆರೈಟಿ ವುಡ್‌ನ ಆಯ್ಕೆಗಳು ಇಲ್ಲಿದ್ದು, ಜನ ತಮ್ಮಿಷ್ಟದ ವಸ್ತುಗಳನ್ನು ಶಾಪಿಂಗ್ ಮಾಡಿ ಎಂಜಾಯ್ ಮಾಡಿದರು. ಕಳೆದ ಬಾರಿಯ ಫರ್ನಿಚರ್ ಮೇಳದಲ್ಲಿ ಪೀಠೋಪಕರಣ ಖರೀದಿಸಿದ್ದುದನ್ನು ಕೆಲ ಗ್ರಾಹಕರು ಮೆಲುಕು ಹಾಕಿದರು.

ಎಕ್ಸ್‌ಪೋಗೆ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್

ಒಟ್ನಲ್ಲಿ, ಎಕ್ಸ್‌ಪೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಾ ಇದ್ದು, ಗ್ರಾಹಕರು ನಾ ಮುಂದು ತಾ ಮುಂದು ಅಂತಾ ಖರೀದಿಗೆ ಮುಗಿಬಿದ್ದರು. ನಿಮ್ಮ ಮನೆಗೂ ಕೂಡ ಏನಾದರೂ ಫರ್ನಿಚರ್ ಬೇಕು ಅಂತ ಹೇಳಿದರೆ ನೀವು ಕೂಡ ಒಮ್ಮೆ ಜೆ.ಪಿ ನಗರದಲ್ಲಿರುವ ಶುಭ್ ಕನ್ವೆನ್ಷನ್ ಸೆಂಟರ್‌ಗೆ ಉಚಿತವಾಗಿ ಭೇಟಿ ನೀಡಬಹುದು. ನಾಳೆಯೇ (ಮಂಗಳವಾರ) ಮೇಳ ಕೊನೆಗೊಳ್ಳಲಿದ್ದು, ತಪ್ಪದೇ ನೀವೂ ಕುಟುಂಬ ಸಮೇತ ಒಮ್ಮೆ ಭೇಟಿ ನೀಡಿ.

RELATED ARTICLES

Related Articles

TRENDING ARTICLES