Wednesday, January 22, 2025

Bigg Boss Kannada : ಮಡಿಕೆಯೊಟ್ಟಿಗೆ ಮನಸುಗಳೂ ಒಡೆಯಿತೇ?

ಬೆಂಗಳೂರು: ಬಿಗ್‌ಬಾಸ್ ದಿನದಿಂದ ದಿನಕ್ಕೆ ಕಷ್ಟದ ದಾರಿಯಲ್ಲಿ ಸಾಗುತ್ತಿದೆ. ಮನೆಯೊಳಗಿನ ಸ್ಪರ್ಧಿಗಳಿಗೆ ಪ್ರತಿ ವಾರವೂ ಹೊಸ ಹೊಸ ಚಾಲೆಂಜ್‌ಗಳು ಎದುರಾಗುತ್ತಿವೆ.

ದೊಡ್ಮನೆಯೊಳಗೆ ಯಾರೂ ಸ್ನೇಹಿತರೂ ಅಲ್ಲ, ಯಾರೂ ಶತ್ರುಗಳೂ ಅಲ್ಲ ಎಂಬುದು ಸತ್ಯವಾಗುತ್ತಿದೆ.ಅದನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಡುವಂಥ ಚಟುವಟಿಕೆಯನ್ನು ಕಿಚ್ಚ ‘ಸೂಪರ್‍ ಸಂಡೆ ವಿತ್ ಸುದೀಪ್‌’ ಸಂಚಿಕೆಯಲ್ಲಿ ಕಿಚ್ಚ ಸದಸ್ಯರಿಗೆ ನೀಡಿದ್ದಾರೆ.

ಚುಟುವಟಿಕೆಗೆ ಅನುಸಾರವಾಗಿ ಒಂದು ಬಿದಿರುಗೊಂಬೆ ನಿಲ್ಲಿಸಲಾಗಿದ್ದು,ಅದರ ಮೇಲೆ ಒಂದು ಮಡಿಕೆ ಜೋಡಿಸಲಾಗಿದೆ. ಸದಸ್ಯರು ಒಬ್ಬರ ಫೋಟೊ ಹಾಕಿ, ಯಾವ ವಿಚಾರಕ್ಕೆ ಅವರ ಮೇಲೆ ಕೋಪ ಇದೆ ಎಂಬುದನ್ನು ಹೇಳಿ ಆಮೇಲೆ ಆ ಮಡಿಕೆಯನ್ನು ಒಡೆಯಬೇಕು.

ಈ ಚಟುವಟಿಕೆ ಮನೆಯೊಳಗಿನ ಸಮತೋಲವನ್ನು ಒಮ್ಮೆ ಕದಡುವುದಂತೂ ಖಚಿತ. ಎಲ್ಲರೂ ಊಹಿಸುವಂತೆ ವಿನಯ್‌, ಸಂಗೀತಾ ಫೋಟೊ ಇಟ್ಟು ಮಡಿಕೆ ಒಡೆದಿದ್ದಾರೆ. ಸಂಗೀತಾ ಕೂಡ ವಿನಯ್ ಫೋಟೊ ಇಟ್ಟು ಮಡಿಕೆ ಒಡೆದಿದ್ದಾರೆ. ಆದರೆ ಈ ನಡುವೆ ಇನ್ನೊಂದು ಶಾಕಿಂಗ್ ಆಯ್ಕೆ ನಡೆದಿದೆ. ಅದು ಕಾರ್ತಿಕ್ ಅವರದ್ದು. ಕಾರ್ತಿಕ್ ಮಡಿಕೆಯ ಮೇಲಿಟ್ಟಿದ್ದು ಸಂಗೀತಾ ಫೋಟೊವನ್ನು! ಸದಾಕಾಲ ನನ್ನ ಫ್ರೆಂಡ್‌ ಎಂದೇ ಹೇಳಿಕೊಂಡು ಬಂದಿದ್ದ ಕಾರ್ತಿಕ್, ಹಲವು ಸಂದರ್ಭಗಳಲ್ಲಿ ಅವರ ಪರವಾಗಿ ಗಟ್ಟಿಯಾಗಿ ನಿಂತಿದ್ದರು ಕೂಡ. ಆದರೆ ಹಿಂದಿನ ವಾರದದಲ್ಲಿ ಪ್ರತಾಪ್ ಜೊತೆ ಮಾತನಾಡುತ್ತ, ‘ಕಾರ್ತೀಕ್ ಬಕೆಟ್ ಹಿಡಿತಿದಾರೆ ಅನಿಸ್ತಿಲ್ವಾ?’ ಎಂದು ಸಂಗೀತಾ ಹೇಳಿದ್ದು ಅವರಿಗೆ ನೋವನ್ನುಂಟು ಮಾಡಿದೆ.

ಹಾಗೆಯೇ ‘ಕಾರ್ತಿಕ್ ಅವರಿಂದ ಸಂಗೀತಾರನ್ನು ಮೈನಸ್ ಮಾಡಿದ್ರೆ ಜೀರೊ ಬರುತ್ತದೆ’ ಎಂದಿರುವುದೂ ಅವರಿಗೆ ಅಸಮಧಾನವನ್ನುಂಟು ಮಾಡಿದೆ.ಇದೆಲ್ಲ ಕಾರಣ ಕೊಟ್ಟು ಸಂಗೀತಾ ಫೋಟೊ ಇಟ್ಟು ಮಡಿಕೆ ಒಡೆದಿರುವ ಕಾರ್ತಿಕ್, ‘ನನ್ನಿಂದ ಸಂಗೀತಾರನ್ನು ಮೈನಸ್ ಮಾಡಿದ್ದೇನೆ. ನಾನು ಜಿರೊ ಅನ್ನುವುದನ್ನು ಪ್ರೂವ್ ಮಾಡಲಿ’ ಎಂದು ಸವಾಲು ಬೇರೆ ಹಾಕಿದ್ದಾರೆ.

ಇದು ಮುಂದಿನ ವಾರದ ಟಾಸ್ಕ್‌ಗಳು ಇನ್ನಷ್ಟು ಟಫ್‌ ಆಗುವುದರ ಸೂಚನೆಯಂತೂ ಹೌದು. ಮನೆಯ ಸಮತೋಲಗಳು ಏರುಪೇರಾದಾಗ ಏನಾಗುತ್ತದೆ? ಯಾರು ಮುನ್ನಲೆಗೆ ಬರುತ್ತಾರೆ? ಯಾರು ಹಿನ್ನೆಲೆಗೆ ಸರಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

RELATED ARTICLES

Related Articles

TRENDING ARTICLES