ವಿಜಯಪುರ: ಬಂಡೆಗೆ ತಲೆ ಜಜ್ಜುವ ವಿಶಿಷ್ಟ ಆಚರಣೆಯೊಂದು ವಿಜಯಪುರ ಜಿಲ್ಲೆಯಲ್ಲಿ ನಡೆಯುತ್ತದೆ. ಇಲ್ಲಿ ಭಕ್ತರು ಓಡೋಡಿ ಬಂದು ಕಲ್ಲಿಗೆ ಜೋರಾಗಿ ತಲೆ ಜಜ್ಜಿ ದೇವರಿಗೆ ನಮಸ್ಕಾರ ಮಾಡತ್ತಾರೆ. ಈ ವಿಚಿತ್ರ ಜಾತ್ರೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದಲ್ಲಿ ನಡೆಯುತ್ತದೆ.
ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆ ವೇಳೆ ಈ ರೀತಿಯ ವಿಶಿಷ್ಟ ಆಚರಣೆ ನಡೆಯುತ್ತದೆ. ಭಕ್ತರು ಒಟ್ಟು ಮೂರು ಸಲ ಬಂಡೆಗೆ ತಲೆಯನ್ನು ಜಜ್ಜಿ ನಮಸ್ಕಾರ ಮಾಡುವ ಪದ್ಧತಿ ಇಲ್ಲಿದೆ.
ಇದನ್ನೂ ಓದಿ: Bigg Boss Kannada : ಮಡಿಕೆಯೊಟ್ಟಿಗೆ ಮನಸುಗಳೂ ಒಡೆಯಿತೇ?
ತಲೆ ಜಜ್ಜಿಕೊಂಡರೂ ಸಣ್ಣಪುಟ್ಟ ಗಾಯವಾಗಲ್ಲ
ನೂರಾರು ಭಕ್ತರಿಂದ ನಡೆಯುವ ಈ ವಿಶಿಷ್ಟ ಆಚರಣೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ವಿಶೇಷ ಎಂದರೆ ಕಲ್ಲಿಗೆ ಎಷ್ಟೇ ಜೋರಾಗಿ ತಲೆ ಜಜ್ಜಿಕೊಂಡರೂ ಯಾರಿಗೂ ಇದುವರೆಗೂ ಒಂದು ಸಣ್ಣಪುಟ್ಟ ಗಾಯ ಕೂಡ ಆಗಿಲ್ಲ
ಸೋಮೇಶ್ವರ ದೇವರ ಶಕ್ತಿಯಿಂದ ಯಾವುದೇ ಅಪಾಯ ಆಗುವುದಿಲ್ಲ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ. ಪ್ರತಿ ವರ್ಷ ಕಾರ್ತಿಕ ಮಾಸದ ಬಳಿಕ ಈ ವಿಶಿಷ್ಟ ಆಚರಣೆಯ ಜಾತ್ರೆ ನಡೆಯುತ್ತದೆ.
ಕಲ್ಲಿಗೆ ತಲೆಯನ್ನು ಜಜ್ಜುವ ಸಂಪ್ರದಾಯ
ದೇವಸ್ಥಾನದ ಎದುರಿಗೆ ಜಮಾಯಿಸೋ ಬಿಂಗಿಯರಿ ಸೋಮೇಶ್ವರ ದೇವರನ್ನು ಆಹ್ವಾನಿಸುತ್ತಾರೆ. ಬಳಿಕ ಭಕ್ತಿಯ ಪರಾಕಾಷ್ಟೆ ಮೆರೆಯುತ್ತಾರೆ. ದೇವಸ್ಥಾನದ ಬಳಿ ನಿಲ್ಲಿಸಿದ ಕಲ್ಲಿಗೆ ಓಡಿ ಬಂದು ತಲೆಯನ್ನು ಜಜ್ಜಿ ಹೋಗುತ್ತಾರೆ, ಈ ರೀತಿ ಪ್ರತಿಯೊಬ್ಬ ಬಿಂಗಿಯೂ ಕೂಡಾ ಮೂರು ಬಾರಿ ಕಲ್ಲಿಗೆ ತಲೆಯನ್ನು ಜಜ್ಜುವುದು ಇಲ್ಲಿನ ಸಂಪ್ರದಾಯವಾಗಿದೆ.
ಬೆನ್ನಿಗೆ ಕಬ್ಬಿಣದ ಗುಂಡಿನಿಂದ ಹೊಡೆಯುವ ಸಂಪ್ರದಾಯ
ಇದೇ ವೇಳೆ, ಇಲ್ಲಿನ ಭಕ್ತರು ಕಬ್ಬಿಣದಿಂದ ತಯಾರಿಸಲಾದ ಮತ್ತು ಸರಪಳಿಯಿಂದ ಕಟ್ಟಲಾದ ಗುಂಡುಗಳನ್ನು ಎತ್ತಿಕೊಂಡು ತಮ್ಮ ಬೆನ್ನಿಗೆ ತಾವೇ ಹೊಡೆದುಕೊಂಡು ಹರಕೆ ತೀರಿಸುವುದೂ ಈ ಜಾತ್ರೆಯಲ್ಲಿ ವಿಶೇಷವಾಗಿದೆ.
fairJatrelord shivaSomeshwara TempleVijayapura