Monday, December 23, 2024

ದರ್ಶನ್ ಸರ್ ಹೊಸ ಮಾಸ್ ಲುಕ್ ಅಭಿಮಾನಿಗಳಿಗೆ ಹಬ್ಬ ಆಗಲಿದೆ : ನಟ ರಿಷಬ್ ಶೆಟ್ಟಿ

ಬೆಂಗಳೂರು : ನಟ ದರ್ಶನ್ ಅಭಿನಯದ ಕಾಟೇರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಡಿ ಬಾಸ್ ಅಭಿನಯಕ್ಕೆ ಫಿದಾ ಆಗಿದ್ದಾರೆ.

ಕಾಟೇರ ಟ್ರೈಲರ್ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಟೇರ ಟ್ರೈಲರ್ ಸದ್ದು ಜೋರಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದರ್ಶನ್ ಸರ್ ಹೊಸ ಮಾಸ್ ಲುಕ್ ಅಭಿಮಾನಿಗಳಿಗೆ ಹಬ್ಬ ಆಗಲಿದೆ. ನಿರ್ದೇಶಕ ತರುಣ್ ಸುಧೀರ್, ರಾಕ್ಲೈನ್ ವೆಂಕಟೇಶ್ ಸರ್ ಗೆ ಅಭಿನಂದನೆಗಳು. ಕಾಟೇರ ಚಿತ್ರಕ್ಕೆ ಅತ್ಯುತ್ತಮ ಅಭೂತಪೂರ್ವ ಯಶಸ್ಸು ಸಿಗಲೆಂದು ಆಶಿಸುತ್ತೇನೆ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಮಾಸ್ ಗೆ ಇರೋದು ಒಂದೇ ಅಡ್ರೆಸ್

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನಸೋರೆ ಟ್ರೈಲರ್​ ಬಗ್ಗೆ ಪ್ರತಿಕ್ರಿಯಿಸಿದ್ದು, ಮಾಸ್ ಗೆ ಇರೋದು ಒಂದೇ ಅಡ್ರೆಸ್, ಅದು ಡಿ ಬಾಸ್ ದರ್ಶನ್ ಸರ್. ಫುಲ್ ಮಾಸ್ ಟ್ರೈಲರ್ ಎಂದು ಹಾಡಿ ಹೊಗಳಿದ್ದಾರೆ. ಸಿಂಪಲ್ ಸುನಿ ಅವರು, ಒಂದ್ ಬಂದೂಕು ಅಲ್ಲ .. ನೂರು ಫಿರಂಗಿ ಬಂದ್ರೂ ತಡೆಯೋಕಾಗೋಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

ಸಿನಿ ಪ್ರಿಯರಿಗೆ ಮುತ್ತಿನಹಾರ ‘ಕಾಟೇರ’

ನಟ ಸತೀಶ್ ನೀನಾಸಂ ಅವರು, ಇತಿಹಾಸದ ಕಥೆಯೊಂದು ತೆರೆಮೇಲೆ ರಾರಾಜಿಸುವ ಸಮಯ. ಸೂಪರ್ ಟ್ರೈಲರ್ ಎಂದು ಕೊಂಡಾಡಿದ್ದಾರೆ. ನಟ ಕೆ.ಎಲ್. ರಾಜಶೇಖರ್ ಅವರು,100% ಪ್ರಾಮಿಸ್ ಮಾಡ್ತೀನಿ.. ‘ಕಾಟೇರ’ ಒಂದೊಂದು ಸೀನೂ ಒಂದೊಂದು ಮುತ್ತು. ಇದೆ 29ನೇ ತಾರೀಖಿಗೆ ಸಿನಿ ಪ್ರಿಯರಿಗೆ ಮುತ್ತಿನಹಾರ ಈ ‘ಕಾಟೇರ’ ಎಂದು ಬರೆದುಕೊಂಡಿದ್ದಾರೆ.

 

RELATED ARTICLES

Related Articles

TRENDING ARTICLES