Wednesday, January 22, 2025

‘ಸಲಾರ್’ ಮೂವಿ ಟಿಕೆಟ್​ ಬುಕಿಂಗ್​ಗೆ ಭರ್ಜರಿ ರೆಸ್ಪಾನ್ಸ್​!

ಬೆಂಗಳೂರು: ‘ಸಲಾರ್’ ಸಿನಿಮಾ ರಿಲೀಸ್​ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಿನಿಮಾಗೆ ಭರ್ಜರಿ ಹೈಪ್ ಸೃಷ್ಟಿ ಆಗಿದೆ. ಸಿನಿಮಾದ ಟ್ರೇಲರ್ ಹಾಗೂ ಪೋಸ್ಟರ್​ಗಳು ಗಮನ ಸೆಳೆದಿವೆ. ‘ಸಲಾರ್’ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.

ಈ ಚಿತ್ರದ ಅಡ್ವಾನ್ಸ್ ಬುಕಿಂಗ್ ಶುಕ್ರವಾರ ಸಂಜೆ ಓಪನ್ ಆಗಿದೆ. ಹಲವು ಶೋಗಳ ಟಿಕೆಟ್​ಗಳು ಈಗಾಲೇ ಬಿಕರಿ ಆಗಿವೆ. ಮುಂಜಾನೆ ಶೋಗಳು ಹೌಸ್​ಫುಲ್ ಕಂಡಿವೆ. ಇಷ್ಟು ದೊಡ್ಡ ರೆಸ್ಪಾನ್ಸ್ ಸಿಗುತ್ತಿರುವುದು ನೋಡಿದರೆ ಸಿನಿಮಾ ಅನಾಯಾಸವಾಗಿ ಹಲವು ದಾಖಲೆಗಳನ್ನು ಬರೆಯಲಿದೆ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

ಇದನ್ನು ಓದಿ: MS ಧೋನಿ​ ವಿರುದ್ದ ಮ್ಯಾಚ್ ಫಿಕ್ಸಿಂಗ್​ ಆರೋಪ ಮಾಡಿದ್ದ IPS​ ಅಧಿಕಾರಿಗೆ ಜೈಲು ಶಿಕ್ಷೆ!

ಬೆಂಗಳೂರಿನಲ್ಲಿ ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಅಡ್ವಾನ್ಸ್ ಬುಕಿಂಗ್ ಆರಂಭಿಸಲಾಗಿದೆ. ಕನ್ನಡಕ್ಕೆ ಕೇವಲ ಒಂದು ಶೋ ನೀಡಲಾಗಿದೆ. ಸದ್ಯ ತೆಲುಗು ವರ್ಷನ್​ಗೆ 100 ಶೋ ಸಿಕ್ಕಿದೆ. ಮುಂಜಾನೆ 5 ಗಂಟೆ ಶೋಗಳು ಅನೇಕ ಕಡೆಗಳಲ್ಲಿ ಹೌಸ್​ಫುಲ್ ಆಗಿವೆ. ಹಂತ ಹಂತವಾಗಿ ಇನ್ನೂ ಹಲವು ಶೋಗಳು ಸೇರ್ಪಡೆ ಆಗಲಿವೆ.

RELATED ARTICLES

Related Articles

TRENDING ARTICLES