Monday, December 23, 2024

ರಾಜ್ಯದಲ್ಲಿ ಕೊವಿಡ್​ ಆತಂಕ: ಎಚ್ಚರಿಕೆ ವಹಿಸುವಂತೆ ವೈದ್ಯರ ಸೂಚನೆ!

ಬೆಂಗಳೂರು: ಕೇರಳದಲ್ಲಿ ಕೊವಿಡ್​ ರೂಪಾಂತರಿ ತಳಿ ಪತ್ತೆಯಾಗಿದ್ದು, ರಾಜ್ಯದಲ್ಲಿ ಕೊವಿಡ್​ ಆತಂಕ ಮನೆ ಮಾಡಿದೆ. ಕೊವಿಡ್ ಬಗ್ಗೆ ನಿರ್ಲಕ್ಷ್ಯವಹಿಸದಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ಈ ಕುರಿತು ಕೆಲವೊಂದು ಸೂಚನೆಗಳನ್ನು ನೀಡಿರುವ ವೈದ್ಯರು, ಒಂದು ಕಡೆಯಿಂದ ಇನ್ನೊಂದು ಕಡೆ ಸಂಚಾರ ಮಾಡುವಾಗ ಕಡ್ಡಾಯವಾಗಿ ಮಾಸ್ಕ್​ ಬಳಸುವುದು ಕಡ್ಡಾಯ. ವಯಸ್ಸಾದವರು, ಸಕ್ಕರೆ ಕಾಯಿಲೆ ಇರುವವರು ಆದಷ್ಟು ಎಚ್ಚರ ವಹಿಸಲು ವೈದ್ಯರು ಸಲಹೆ ನೀಡಿದ್ದಾರೆ. ಕೆಮ್ಮು, ನೆಗಡಿ, ಜ್ವರ ಇದ್ದರೆ ಈಗಿನಿಂದಲೇ ಮಾಸ್ಕ್ ಬಳಸಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಸಿಲಿಂಡರ್ ಸ್ಫೋಟಕ್ಕೆ 9 ತಿಂಗಳ ಮಗು ಸೇರಿ 7 ಮಂದಿಗೆ ಗಂಭೀರ ಗಾಯ!

ಇನ್ನು, ಯಾರಿಗೆ ಕೆಮ್ಮು ಇರುತ್ತದೆಯೋ ಅಂತಹವರ ಹತ್ತಿರ ಹೋಗುವುದು ಕಡಿಮೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಆದಷ್ಟು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES