Sunday, December 22, 2024

ಹೃದಯಾಘಾತದಿಂದ ಬಿಜೆಪಿ ಶಾಸಕರ ಪುತ್ರ ನಿಧನ

ರಾಯಚೂರು : ಹೃದಯಾಘಾತಕ್ಕೆ ಒಳಗಾಗಿ ಲಿಂಗಸಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಅವರ ಪುತ್ರ ಶ್ರೀಮಂತರಾಯ (32) ನಿಧನರಾಗಿದ್ದಾರೆ.

ಎದೆನೋವು ಕಾಣಿಸಿಕೊಂಡ ಹಿನ್ನಲೆ ಶ್ರೀಮಂತರಾಯರನ್ನು ಕೂಡಲೇ ಬೆಂಗಳೂರಿನ ಅಫೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಅವರ ಮೃತದೇಹವನ್ನು ಬೆಂಗಳೂರಿನಿಂದ ಲಿಂಗಸುಗೂರಿಗೆ ತರಲಾಗುತ್ತಿದ್ದು, ನಾಳೆ ಮಧ್ಯಾಹ್ನ 2 ಗಂಟೆಗೆ ಲಿಂಗಸಗೂರಿನ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತ ಶ್ರೀಮಂತರಾಯ ಅವರು ಓರ್ವ ಪುತ್ರ, ಪತ್ನಿ, ಸಹೋದರರು, ತಂದೆ, ತಾಯಿ, ಸೇರಿದಂತೆ ಅಪಾರ ಬಂಧು ಬಳಗದಿಂದ ಅಗಲಿದ್ದಾರೆ. ಶ್ರೀಮಂತರಾಯ ವಜ್ಜಲ್ ನಿಧನಕ್ಕೆ ಪಕ್ಷದ ಮುಖಂಡರು, ಕಾರ್ಯಕರ್ತರು, ಕ್ಷೇತ್ರದ ಜನತೆ ಕಂಬನಿ ಮಿಡಿದಿದ್ದಾರೆ. ಕ್ಷೇತ್ರದ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುತ್ತಿದ್ದ ಅವರ ಸಾವಿ‌ನ ಸುದ್ದಿ ತಿಳಿದು ಕ್ಷೇತ್ರದ ಜನತೆ ದುಃಖಿತರಾಗಿದ್ದಾರೆ.

RELATED ARTICLES

Related Articles

TRENDING ARTICLES