ಬೆಂಗಳೂರು: ನಿತ್ಯ ಬೆಳಿಗ್ಗೆ 5 ಗಂಟೆಗೆ ‘ನಮ್ಮ ಮೆಟ್ರೊ’ ಸಂಚಾರ ಆರಂಭವಾಗುತ್ತಿದ್ದು, ಭಾನುವಾರ ಮಾತ್ರ 7 ಗಂಟೆಗೆ ಶುರುವಾಗುತ್ತದೆ. ಇದರಿಂದ ಭಾನುವಾರ ರಜೆ ಇಲ್ಲದ ಖಾಸಗಿ ಕಂಪನಿಗಳಲ್ಲಿ ಬೆಳಿಗಿನ ಪಾಳಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ತೊಂದರೆಯಾಗಿದೆ.
2ನೇ ಶನಿವಾರ, 4ನೇ ಶನಿವಾರ ಮುಂತಾದ ಸಾಮಾನ್ಯ ರಜೆಗಳ ದಿನಗಳಲ್ಲಿ ಬೆಳಿಗ್ಗೆ 6ಕ್ಕೆ ಮೆಟ್ರೊ ಸೇವೆ ಆರಂಭವಾಗುತ್ತದೆ. ಈ ಅವಧಿಯನ್ನೇ ಭಾನುವಾರಕ್ಕೂ ಅನ್ವಯಿಸಬೇಕು ಎಂಬುದು ಉದ್ಯೋಗಿಗಳ ಬೇಡಿಕೆ ಯಾಗಿದೆ.
ಇದನ್ನೂ ಓದಿ: 2024ರ ಜನಗಣತಿ ಬಳಿಕ ಮಹಿಳಾ ಮೀಸಲಾತಿ ಜಾರಿಗೆ!
ನಾವು ಬೇರೆ ಬೇರೆ ಪಾಳಿಯಲ್ಲಿ ಕೆಲಸ ಮಾಡುತ್ತೇವೆ. ತಿಂಗಳಿಗೆ ಒಂದು ವಾರ ಬೆಳಿಗ್ಗೆ 7ಕ್ಕೆ ಕಚೇರಿಯಲ್ಲಿ ಇರಬೇಕು. ಆ ವಾರ 6 ದಿನ ಸಮಸ್ಯೆ ಇರುವುದಿಲ್ಲ. ಭಾನುವಾರ ಬೆಳಿಗ್ಗೆ ಕಚೇರಿಗೆ ತೆರಳುವುದೇ ಸಮಸ್ಯೆ. ಆ ದಿನ ಆಟೊ ಅಥವಾ ಕ್ಯಾಬ್‌ಗಳಲ್ಲಿ ತೆರಳಬೇಕಾಗುತ್ತದೆ. ಇದು ದುಬಾರಿ ಖರ್ಚು’ ಎಂದು ಪ್ರಯಾಣಿಕರೊಬ್ಬರು ತಮ್ಮ ಅಳಲು ತೋಡಿಕೊಂಡರು.