Thursday, December 19, 2024

ನಾವು ಲಿಂಗಾಯತ ಶಕ್ತಿ ಪ್ರದರ್ಶನ ಮಾಡುತ್ತೇವೆ : ಶಾಮನೂರು ಶಿವಶಂಕರಪ್ಪ

ದಾವಣಗೆರೆ : ಚಿತ್ರದುರ್ಗದಲ್ಲಿ ಸಿಎಂ ಸಿದ್ದರಾಮಯ್ಯ ಅಹಿಂದ ಶಕ್ತಿ ಪ್ರದರ್ಶನ ವಿಚಾರಕ್ಕೆ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ನಾವು ಲಿಂಗಾಯಿತ ಶಕ್ತಿ ಪ್ರದರ್ಶನ ಮಾಡುತ್ತೇವೆ. ದಾವಣಗೆರೆ ಮಹಾ ಅಧಿವೇಶನದಲ್ಲಿ ಶಕ್ತಿ ಪ್ರದರ್ಶನ ಮಾಡುತ್ತೇವೆ. ಜಾತಿ ಗಣತಿ ಬಿಡುಗಡೆಗೆ ಒಕ್ಕೊರಲಾಗಿ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಹೇಳಿದ್ದಾರೆ.

ಜಾತಿಗಣತಿ ವರದಿ ಬಿಡುಗಡೆಗೊಳಿಸದಂತೆ ಸಿಎಂಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, 60ಕ್ಕೂ ಹೆಚ್ಚು ಶಾಸಕರ ಸಹಿ ಹಾಕಿ ಸಿಎಂಗೆ ಪತ್ರ ಕೊಟ್ಟಿದ್ದೇವೆ. ಅವೈಜ್ಞಾನಿಕವಾಗಿ ವರದಿ ಮಾಡಲಾಗಿದೆ ಎಂದು ತಿಳಿಸಲಾಗಿದೆ‌. ಲಿಂಗಾಯಿತ ಶಾಸಕರು ವಿರೋಧ ವ್ಯಕ್ತಪಡಿಸಿದ್ದೇವೆ. 73 ಲಿಂಗಾಯಿತ ಶಾಸಕರಲ್ಲಿ 60 ಶಾಸಕರು ಸಹಿ ಮಾಡಿ ಪತ್ರ ಕೊಟ್ಟಿದ್ದೇವೆ. ಸಿಎಂ ನಾನೇ ವರದಿ ನೋಡಿಲ್ಲ, ನೀವು ಈಗಲೇ ವಿರೋಧ ಮಾಡುತ್ತೀರಾ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES