ಮೈಸೂರು : ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಪ್ರಸ್ತಾವನೆ ವಿಚಾರ ಕುರಿತು ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಪವರ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಮೂರ್ಖತನದ ಪರಮಾವಧಿ. ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರೇ ಸೂಕ್ತ ಎಂದು ಹೇಳಿದ್ದಾರೆ.
ಈಗಾಗಲೇ ಕಾಂಗ್ರೆಸ್, ಬಿಜೆಪಿ ಎರಡೂ ಸರ್ಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ಸದನದಲ್ಲಿ ರೆಜ್ಯೂಲೂಷನ್ ಪಾಸ್ ಮಾಡಿ ಕೇಂದ್ರಕ್ಕೆ ಕಳುಹಿಸಿವೆ. ಕೇಂದ್ರದಲ್ಲಿ ಅಧಿಕೃತ ಮುದ್ರೆ ಬಿಳೋದು ಬಾಕಿ ಇದೆ. ಹೀಗಿರುವಾಗ ಮತ್ತೆ ಈ ಬಗ್ಗೆ ಚರ್ಚೆ ಏಕೆ? ಪ್ರಧಾನಿ ನರೇಂದ್ರ ಮೋದಿಗಿಂತಲೂ ಹೆಚ್ಚು ಅಭಿವೃದ್ಧಿ ಮಾಡಿದವರು ನಾಲ್ವಡಿಯವರು ಎಂದು ತಿಳಿಸಿದ್ದಾರೆ.
ಪ್ರಸಾದ್ ಅಬ್ಬಯ್ಯಗೆ ಮಾಹಿತಿ ಇಲ್ಲ
ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ರೆಜ್ಯೂಲೂಷನ್ ಆಗಿತ್ತು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ, ಸಿದ್ದರಾಮಯ್ಯ ಸರ್ಕಾರದ ರೆಜ್ಯೂಲೂಷನ್ ಮರೆಮಾಚಿ ಮತ್ತೆ ಬೊಮ್ಮಾಯಿ ಇದ್ದ ವೇಳೆ ರೆಜ್ಯೂಲೂಷನ್ ಪಾಸ್ ಮಾಡಿ ಕಳುಹಿಸಿದ್ರು. ಈ ಪ್ರಸಾದ್ ಅಬ್ಬಯ್ಯಗೆ ಈ ಬಗ್ಗೆ ಮಾಹಿತಿ ಇಲ್ಲ ಅಂತ ಕಾಣುತ್ತೆ. ಪ್ರತಾಪ್ ಸಿಂಹ ಕೇಂದ್ರದಲ್ಲಿ ಅನುಮತಿ ಕೊಡಿಸ್ತೀನಿ ಅಂತ ಹೇಳಿದ್ರು. ಆದ್ರೆ, ಫಾಲೋಪ್ ಮಾಡಲಿಲ್ಲ ಎಂದು ನಂಜರಾಜೇ ಅರಸ್ ಹೇಳಿದ್ದಾರೆ.