Monday, December 23, 2024

ದುಬೈ ಕರೆನ್ಸಿ ಎಂದು ಕಲರ್ ಜೆರಾಕ್ಸ್ ಪೇಪರ್ ಕೊಟ್ಟ ಭೂಪ!

ಬೆಂಗಳೂರು: ಅರ್ಧ ಬೆಲೆಗೆ ದುಬೈ ಕರೆನ್ಸಿ ಕೊಡುತ್ತೇನೆ ಎಂದು ಹೇಳಿ ಕಲರ್ ಜೆರಾಕ್ಸ್ ಪೇಪರ್ ಕೊಟ್ಟು ವಂಚಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಮೂಲದ ಇಮ್ರಾನ್ ಶೇಕ್ ಬಂಧಿತ ಆರೋಪಿ, ಮತ್ತೊಬ್ಬ ಆರೋಪಿ ರುಕ್ಸಾನ ಪರಾರಿಯಾಗಿದ್ದಾರೆ.  ಉದ್ಯಮಿಗಳನ್ನ ಪರಿಚಯ ಮಾಡಿಕೊಳ್ಳುತ್ತಿದ್ದ ಕಿಲಾಡಿ ಜೋಡಿಗಳು ನಮ್ಮತ್ರ ಸಾಕಷ್ಟು ದುಬೈ ಕರೆನ್ಸಿ ಇದೆ. ಆದ್ರೆ, ಎಲ್ಲಾ ಕರೆನ್ಸಿನಾ ಎಕ್ಸ್ ಚೇಂಜ್ ಮಾಡೋದು ಕಷ್ಟ ಎನ್ನುತ್ತಿದ್ದರು. ಒಂದು ಧಿರಾಮ್ ಗೆ 22-25 ರೂಪಾಯಿ ಆಗುತ್ತೆ ಆದರೆ, 12 ರೂಪಾಯಿ ಕೊಟ್ರೆ ಧಿರಾಮ್ ಕೊಡ್ತಿವಿ ಎಂದು ನಂಬಿಸುತ್ತಿದ್ದರು.

ಇದನ್ನೂ ಓದಿ: ಶಬರಿಮಲೆಗೆ ಹೊರಟಿದ್ದ ಬಸ್​ ಮತ್ತು ಆಟೋ ನಡುವೆ ಅಪಘಾತ: ಐದು ಸಾವು!

ಉದ್ಯಮಿಗಳನ್ನು ನಂಬಿಸಲು ಆರಂಭದಲ್ಲಿ ಒಂದು ಅಸಲಿ ಕರೆನ್ಸಿ ಕೊಟ್ಟು ಚೆಕ್ ಮಾಡಿಕೊಳ್ಳಿ ಅಂತ ಬಿಡುತ್ತಿದ್ದರು. ಯಾಮಾರಿದವರು ಹಣ ರೆಡಿ ಮಾಡಿಕೊಂಡು ಕರೆನ್ಸಿ ಎಕ್ಸ್ ಚೇಂಜ್ ಗೆ ಮುಂದಾಗಿ ನಂತರ ಆರೋಪಿ ಶೇಕ್ ಹಣ ಪಡೆದು ಜೆರಾಕ್ಸ್ ನೋಟ್ ಕೈಗಿಟ್ಟು ಎಸ್ಕೇಪ್ ಆಗ್ತಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಇಮ್ರಾನ್ ಶೇಕ್ ನ ಬಂಧಿಸಿರುವ ಸಿಸಿಬಿ ಪೊಲೀಸರು ಬಂಧಿತನಿಂದ ಸುಮಾರು ನೂರಕ್ಕು ಹೆಚ್ಚು ನಕಲಿ ಧಿರಾಮ್ ವಶಕ್ಕೆ ಪಡೆದಿದ್ದಾರೆ. ಇಮ್ರಾನ್ ಜೊತೆಗಿದ್ದ ರುಕ್ಸಾನ ಬಳಿ ಮತ್ತಷ್ಟು ನಕಲಿ ಕರೆನ್ಸಿ ಇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದ್ದು ಪರಾರಿಯಾಗಿರುವ ರುಕ್ಸಾನಗಾಗಿ ಆಡುಗೋಡಿ ಪೊಲೀಸರು ಬಲೆ ಬೀಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES