Wednesday, January 22, 2025

SBI ಬ್ಯಾಂಕ್​ಗೆ​ ಕನ್ನ:18 ಲಕ್ಷ ದೋಚಿ ಪರಾರಿ!

ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ತೋರಣ ಗ್ರಾಮದ SBI ಬ್ಯಾಂಕ್​ಗೆ ಖದೀಮರು ಕನ್ನ ಹಾಕಿ ಬ್ಯಾಂಕ್​​ನಲ್ಲಿದ್ದ 18 ಲಕ್ಷಕ್ಕೂ ಅಧಿಕ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಗುರುವಾರ ತಡರಾತ್ರಿ ಖದೀಮರು ಕೈಚಳಕ ತೋರಿದ್ದಾರೆ. ಬ್ಯಾಂಕ್ ಹಿಂಬದಿಯ ಕಿಟಕಿ ಒಡೆದು ಒಳನುಸುಳಿರುವ ಖದೀಮರು ಸ್ಟ್ರಾಂಗ್​​ ರೂಮ್ ಪ್ರವೇಶಿಸಿ ಗ್ಯಾಸ್​​​​ ಕಟರ್​ನಿಂದ ಲಾಕರ್​ ಒಡೆದು ಹಣ, ಚಿನ್ನಾಭರಣ ದೋಚಿದ್ದಾರೆ. ಕೃತ್ಯಕ್ಕೂ ಮುನ್ನ ಸಿಸಿಟಿವಿ, ಜನರೇಟರ್ ಪವರ್ ಸಪ್ಲೈ ಕಟ್ ಮಾಡಿ ಒಳನುಗ್ಗಿರೋ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಶಿರಾದಲ್ಲಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಇಬ್ಬರ ದುರ್ಮರಣ

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೆಘಣ್ಣನವರ, ಸಿಪಿಐ ರಘುವೀರಸಿಂಗ್ ಠಾಕೂರ್ ಸೇರಿದಂತೆ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬ್ಯಾಂಕ್​ನಲ್ಲಿ ಬೆರಳಚ್ಚು ತಜ್ಞರ ತಂಡ, ಡಾಗ್ ಸ್ಕ್ವಾಡ್ ತಂಡ ಪರಿಶೀಲನೆ ನಡೆಸಿದೆ. ಕಮಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES