Wednesday, January 22, 2025

ಒಂದು ತಿಂಗಳಲ್ಲೇ 1468ಕ್ಕೂ ಹೆಚ್ಚು ಡೇಂಘಿ ಕೇಸ್​​ ಪತ್ತೆ!

ಬೆಂಗಳೂರು: ನಗರದಲ್ಲಿ ದಿನೇದಿನೆ ಡೆಂಗ್ಯೂ ಪ್ರಕರಣಗಳು ಏರುತ್ತಲೇ ಸಾಗಿದ್ದು, ಜನ ಹಾಗೂ ವೈದ್ಯರಲ್ಲಿ ಆತಂಕ ಹೆಚ್ಚಿಸಿದೆ.

ಕೇವಲ ಒಂದೇ ತಿಂಗಳಲ್ಲೇ 1468ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೂ ಕೇವಲ ರಾಜ್ಯ ರಾಜಧಾನಿಯಲ್ಲಿ ಒಟ್ಟು 7800ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು 15200ಕ್ಕೂ ಹೆಚ್ಚು ಪ್ರಕರಣಗಳು ಸಕ್ರಿಯವಾಗಿವೆ. ಇಲ್ಲಿಯವರೆಗೂ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರ ಬ್ಲಡ್ ಸ್ಯಾಂಪಲ್‌ ಅನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು, 80,000ಕ್ಕೂ ಹೆಚ್ಚು ಡೆಂಗ್ಯೂ ಸೋಂಕಿತರು ಪತ್ತೆಯಾಗಿದ್ದಾರೆ.

ಇದನ್ನೂ ಓದಿ: SBI ಬ್ಯಾಂಕ್​ಗೆ​ ಕನ್ನ:18 ಲಕ್ಷ ದೋಚಿ ಪರಾರಿ!

ಬೆಂಗಳೂರಿನ ಬೊಮ್ಮನಹಳ್ಳಿ ವಲಯದಲ್ಲಿ 180 ಕೇಸ್, ದಾಸರಹಳ್ಳಿ ವಲಯದಲ್ಲಿ 3 ಕೇಸ್, ಮಹದೇವಪುರ ವಲಯದಲ್ಲಿ 182 ಕೇಸ್‌ ಹಾಗೂ ಯಲಹಂಕ ವಲಯದಲ್ಲಿ 144 ಕೇಸ್ ಪತ್ತೆಯಾಗಿದೆ. ಸಾರ್ವಜನಿಕರು ಹೆಚ್ಚು ಜಾಗೃತರಾಗಿರಬೇಕೆಂದು ವೈದ್ಯರು ಸೂಚಿಸಿದ್ದಾರೆ.

RELATED ARTICLES

Related Articles

TRENDING ARTICLES