Thursday, April 24, 2025

ಬೆಂಗಳೂರು ಟೆಕ್ಕಿ ಮೇಲೆ ಗ್ಯಾಂಗ್ ರೇಪ್?

ಬೆಂಗಳೂರು: ಖಾಸಗಿ ಕಂಪನಿಯೊಂದರ ಟೆಕ್ಕಿ ತನ್ನ ಮೇಲೆ ಗ್ಯಾಂಗ್ ರೇಪ್ ನಡೆದಿದೆ ಎಂದು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಡಿ.12 ರಂದು ರಾತ್ರಿ ಸಂತ್ರಸ್ತ ಯುವತಿ ಕೋರಮಂಗಲ ಪಬ್ ಗೆ ಹೋಗಿದ್ದರು. ಪಬ್​ ನಲ್ಲಿ ಆಕೆಗೆ ಪ್ರಜ್ಞೆ ತಪ್ಪಿತ್ತು. ಪ್ರಜ್ಞೆ ಬಂದಾಗ ಆಕೆ ಆಡುಗೋಡಿಯ ದೇವೇಗೌಡ ಲೇಔಟ್ ಬಳಿ ಇದ್ದುದು ತಿಳಿದುಬಂದಿದೆ. ತಕ್ಷಣ ಅವರು ಸ್ಥಳೀಯರ ನೆರವು ಪಡೆದು 112ಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆಡುಗೋಡಿ ಪೊಲೀಸರು ಸಂತ್ರಸ್ತ ಯುವತಿಯ ರಕ್ಷಣೆ ಮಾಡಿದ್ದಾರೆ. ಅಲ್ಲಿಂದ ಆಕೆಯನ್ನು ಕೋರಮಂಗಲ ಠಾಣೆಗೆ ಕರೆತಂದಿದ್ದಾರೆ.

ಇದನ್ನೂ ಓದಿ: ಸದಾಶಿವ ಆಯೋಗದ ವರದಿ ರದ್ದತಿಗೆ ಒತ್ತಾಯಿಸಿ ಪ್ರತಿಭಟನೆ!

ಅಲ್ಲಿ ಯುವತಿ ತಾನು ಪ್ರಜ್ಞಾಹೀನಳಾಗಿದ್ದಾಗ ಅತ್ಯಾಚಾರ ನಡೆದಿರುವ ಶಂಕೆಯಿದೆ ಎಂದು ದೂರು ನೀಡಿದ್ದಾಳೆ. ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES