Monday, December 23, 2024

18ಗಂಟೆ ಕ್ಯೂ ನಿಂತು ಕಾದರು ಸಿಗುತ್ತಿಲ್ಲ ಅಯ್ಯಪ್ಪನ ದರ್ಶನ: ಭಕ್ತರು ಆಕ್ರೋಶ!

ಕೇರಳ: ಶಬರಿಮಲೆಯಲ್ಲಿ ಎಲ್ಲಾ ವ್ಯವಸ್ಥೆ ಸೂಕ್ತವಾಗಿದೆ, ಭಕ್ತರಿಗೆ ಏನೂ ತೊಂದರೆ ಇಲ್ಲ ಎಂಬ ಕೇರಳ ಸಿಎಂ ಹೇಳಿಕೆ ಹೊರತಾಗಿಯೂ ಪರಿಸ್ಥಿತಿ ಹಾಗಿಲ್ಲ. ಅವ್ಯವಸ್ಥೆ ಈಗಲೂ ಮುಂದುವರೆದಿದೆ.

18 ಗಂಟೆ ಸರದಿಯಲ್ಲಿ ನಿಂತು ಹೋದರೂ ದೇವರ ಮುಖವನ್ನು ನೋಡುವ ಮುನ್ನವೇ ನಮ್ಮನ್ನು ಎಳೆದು ಹೊರಗೆ ಹಾಕಲಾಗುತ್ತಿದೆ ಎಂದು ಭಕ್ತರು ದೂರಿದ್ದಾರೆ. ನಮ್ಮ ಬಸ್‌, ನಿಂತ ಜಾಗದಿಂದ ಗಂಟೆಗಟ್ಟಲೆ ಕದಲುತ್ತಿಲ್ಲ. ಭಕ್ತರ ನಿರ್ವಹಣೆಯಲ್ಲಿ ಸರ್ಕಾರ ಪೂರ್ಣ ವಿಫಲವಾಗಿದೆ. ಬೆಟ್ಟದ ಬುಡದವರೆಗೆ ಬಸ್‌ನಲ್ಲಿ ಹೋಗಿ ಅಲ್ಲಿಂದ ಕಾಲ್ನಡಿಗೆಯಲ್ಲೇ ಮೇಲೇರಬೇಕು. ಅಷ್ಟಾದ ಮೇಲೂ ಸರದಿ ಉದ್ದ ಇರುವ ಕಾರಣ ಮಕ್ಕಳು, ವೃದ್ಧ ಭಕ್ತರು ಕೂಡಾ ಅರಣ್ಯದಲ್ಲಿ ಮಲಗಿ, ಅಲ್ಲೇ ನದಿಯಲ್ಲೇ ಸ್ನಾನ ಮಾಡಬೇಕಾದ ಪರಿಸ್ಥಿತಿ ಇದೆ.

ಇದನ್ನೂ ಓದಿ: Pro Kabaddi: ಬೆಂಗಳೂರು ಗೂಳಿಗಳಿಗೆ ಮಣಿದ ಜೈಪುರ್​ ತಂಡ!

ಇಷ್ಟೆಲ್ಲಾ ಆಗಿ ಬೆಟ್ಟ ಏರಿದ ಬಳಿಕ ತಗಡಿನ ಶೆಡ್‌ನೊಳಗೆ ಮತ್ತೆ ಬಿಸಿಲಿನಲ್ಲಿ ಗಂಟೆಗಟ್ಟಲೆ ಕಾಯಬೇಕು. ಇಷ್ಟೆಲ್ಲಾ ಸಾಹಸ ಮಾಡಿ ದೇಗುಲದ 18 ಮೆಟ್ಟಿಲೇರಿ ದೇವರ ದರ್ಶನ ಮಾಡೋಣವೆಂದರೆ ಅಲ್ಲಿ ನಿಂತಿರುವ ಭದ್ರತಾ ಸಿಬ್ಬಂದಿ ದೇವರನ್ನೂ ನೋಡಲು ಬಿಡದೆ ಎಳೆದು ಹಾಕುತ್ತಾರೆ ಎಂದು ಹಲವು ಭಕ್ತರು ಗೋಳು ತೋಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES