Sunday, January 5, 2025

ಒಂಟಿ ವೃದ್ದನ ಮೇಲೆ ಹಲ್ಲೆ ನಡೆಸಿ ಧರೋಡೆಗೆ ಯತ್ನ!: ಆರೋಪಿಗಳನ್ನು ಹಿಡಿದ ಜನರು!

ಮೈಸೂರು: ಒಂಟಿ ವೃದ್ದ ವಾಸವಾಗಿದ್ದ ಮನೆಗೆ ನುಗ್ಗಿದ ದುಷ್ಕರ್ಮಿಗಳು ವೃದ್ದನ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿರುವ ಘಟನೆ ಮೈಸೂರಿನ ಚಾಮುಂಡಿಪುರಂ ಎರಡನೇ ಮೇನ್ ರಸ್ತೆಯಲ್ಲಿ ನಡೆದಿದೆ.

ವೃದ್ದ ಸುರೇಶ್ ಎಂಬುವರ ಮನೆ ಕಳ್ಳತನ ಯತ್ನ. ಕಿರಣ್ ಮತ್ತು ಕಿರಣ್ ಕುಮಾರ್ ಎಂಬ ಇಬ್ಬರು ಆರೋಪಿಗಳು ವೃದ್ದನ ಮೇಲೆ ಹಲ್ಲೆ ನಡೆಸಿದವರು, ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆ ಒಳಗೆ ನುಗ್ಗಿದ ಇಬ್ಬರು ಖದೀಮರು ವೃದ್ದನ ಕುತ್ತಿಗೆಯನ್ನಿ ಹಿಸುಕಿ ಹಲ್ಲೆ ನಡೆಸಿದ್ದಾರೆ, ಈ ವೇಳೆ ವೃದ್ದ ಸುರೇಶ್​ ಜೋರಾಗಿ ಕಿರುಚಿಕೊಂಡಾಗ ನೆರೆಯ ಮನೆಯವರು ಸಹಾಯಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಓರ್ವ ಆರೋಪಿ ಪರಾರಿಯಾಗಿದ್ದು ಮತ್ತೋರ್ವ ಸಿಕ್ಕಿಬಿದ್ದಾನೆ.

ಇದನ್ನೂ ಓದಿ: ಸಾಯಿಬಾಬಾ ಸಮಾಧಿ ದೇಗುಲಕ್ಕೆ ಶಾರುಕ್​ ಖಾನ್ ಭೇಟಿ!

ಸಾರ್ವಜನಿಕರು ಕಿರಣ್ ಕುಮಾರ್ ಎನ್ನುವವನ್ನು ಹಿಡಿದು ಥಳಿಸಿದ್ದಾರೆ. ಸ್ಥಳಕ್ಕೆ ಕೆ.ಆರ್.ಠಾಣೆ ಪೊಲೀಸರು ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES