Friday, December 27, 2024

ರಾಮ ಮಂದಿರ ಒಡೆದು ಹಾಕ್ತೀವಿ, ಬಾಬ್ರಿ ಮಸೀದಿ ಮತ್ತೆ ಕಟ್ತೀವಿ : ವಿವಾದಾತ್ಮಕ ಹೇಳಿಕೆ ವೈರಲ್

ಬೆಂಗಳೂರು : ರಾಮ ಮಂದಿರವನ್ನು ಒಡೆದು ಬಾಬ್ರಿ ಮಸೀದಿ ಕಟ್ಟುತ್ತೇವೆ ಎಂದು ವ್ಯಕ್ತಿಯೊಬ್ಬ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ರಾಮ ಮಂದಿರ ನಿರ್ಮಾಣ ಮಾಡಲು ಎಷ್ಟೊಂದು ಸ್ಥಳವಿತ್ತು. ಬಾಬ್ರಿ ಮಸೀದಿ ಜಾಗದಲ್ಲೇ ಯಾಕೆ ರಾಮ ಮಂದಿರ ಮಾಡಿದ್ದೀರಿ? ಬಾಬ್ರಿ ಮಸೀದಿ ನಿರ್ಮಾಣ ಮಾಡೇ ಮಾಡುತ್ತೇವೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಲ್ಲಿ ಇರುವವರೆಗೆ ಮಾತ್ರ ರಾಮ ಮಂದಿರ ಇರುತ್ತೆ. ನಿಮ್ಮ ಮೋದಿ ಹಾಗೂ ಯೋಗಿ ಆಡಳಿತದಿಂದ ಕೆಳಗಿಳಿದ ಬಳಿಕ ನಾವು ರಾಮ ಮಂದಿರ ಒಡೆದು ಹಾಕುತ್ತೇವೆ. ಬಳಿಕ ಅದೇ ಸ್ಥಳದಲ್ಲಿ ಬಾಬ್ರಿ ಮಸೀದಿ ಪುನರ್ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಎಲ್ಲಿಯವರೆಗೆ ಪೂಜೆ ಮಾಡುತ್ತೀರಿ?

ಹಿಂದೂಗಳು ರಾಮ ಮಂದಿರ ನಿರ್ಮಾಣ ಮಾಡಿ ಪೂಜೆ ಮಾಡ್ತಾ ಇರಿ. ಇದು ಎಲ್ಲಿಯವರೆಗೆ? ಪ್ರಧಾನಿ ಮೋದಿ ಹಾಗೂ ಯೋಗಿ ಇರುವ ತನಕ ಮಾತ್ರ. ಅಲ್ಲಿಯವರೆಗೆ ನೀವು ರಾಮ ಮಂದಿರದಲ್ಲಿ ಪೂಜೆ ಮಾಡುತ್ತೀರಿ. ಅವರ ಹೋದ್ಮೇಲೆ ನಾವು ರಾಮ ಮಂದಿರ ಕೆಡವಿ ಹಾಕುತ್ತೇವೆ. ರಾಮ ಮಂದಿರವನ್ನು ದೂರಕ್ಕೆ ಎಸೆದು, ಅಲ್ಲಿಯೇ ಮಸೀದಿಯನ್ನು ಮತ್ತೆ ನಿರ್ಮಿಸುತ್ತೇವೆ ಎಂದು ಹೇಳಿದ್ದಾರೆ.

.22ರಂದು ರಾಮ ಮಂದಿರ ಉದ್ಘಾಟನೆ

ಜನವರಿ 22 ರಂದು ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಂದಿರ ಲೋಕಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಸಕಲ ಸಿದ್ಧತೆ, ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ. ದೇಶದೆಲ್ಲೆಡೆ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿರುವ ಬೆನ್ನಲ್ಲೇ ಈ ವ್ಯಕ್ತಿಯ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

RELATED ARTICLES

Related Articles

TRENDING ARTICLES