ಮೈಸೂರು: ಸಂಸತ್ ಸದನದ ಒಳಗೆ ಸ್ಮೋಕ್ ಬಾಂಬ್ ಸಿಡಿಸಿ ಆತಂಕ ಸೃಷ್ಟಿಸಿದ್ದ ಪ್ರಕರಣದಲ್ಲಿ ಮೈಸೂರಿನಲ್ಲಿರುವ ಮನೊರಂಜನ್ ನಿವಾಸಕ್ಕೆ ಸ್ಟೇಟ್ ಇಂಟೆಲಿಜೆನ್ಸ್ ಹಾಗು ಕೇಂದ್ರ ಗುಪ್ತಚರ ಪೊಲೀಸರು ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಕಲೆಹಾಕುತ್ತಿದ್ದಾರೆ.
ಕೇಂದ್ರ ಗುಪ್ತಚರ ಇಲಾಖೆ ಮೈಸೂರು ವಿಭಾಗದ ಉಪ ನಿರ್ದೇಶಕ ಪ್ರವೀಣ್ ನೇತೃತ್ವದಲ್ಲಿ ಮನೊರಂಜನ್ ಪೂರ್ವಾಪರ, ಆತನ ರೂಂ ಒಳಗೆ ಇಂಚಿಂಚು ಪರಿಶೀಲನೆ ಮಾಡಿ ಆತ ಬಳಸುತ್ತಿದ್ದ ವಸ್ತುಗಳು ಸೇರಿದಂತೆ ಪುಸ್ತಕಗಳ ಮಾಹಿತಿ ಸಂಗ್ರಹಣೆ ಮಾಡಲಾಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮನೆಯಲ್ಲಿ ತಪಾಸಣೆ ನಡೆಸಿದ ಪೊಲೀಸರು ಮನೆಯಿಂದ ಹೊರಬಂದಿದ್ದಾರೆ.
ಇದನ್ನು ಓದಿ: ಸಂಸದ ಪ್ರತಾಪ್ ಸಿಂಹ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ!
ಸದ್ಯ ಆತನ ಸಂಪರ್ಕಿತರ ಸುಳಿವುಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.