Wednesday, January 22, 2025

ಸಂಸತ್​ನಲ್ಲಿ ಸ್ಮೋಕ್​ ಬಾಂಬ್​ ಎಸೆದ ಮನೋರಂಜನ್​ ಹಿನ್ನೆಲೆ ಏನು ಗೊತ್ತಾ?

ಮೈಸೂರು: ಸಂಸತ್‍ನಲ್ಲಿ ಸ್ಮೋಕ್ ಬಾಂಬ್ ಎಸೆದಿದ್ದ ಡಿ. ಮನೋರಂಜನ್ (34) ಮೈಸೂರು ವಾಸವಾಗಿದ್ದು ಮೂಲತಃ ಹಾಸನ ಜಿಲ್ಲೆಯವನಾಗಿದ್ದು ಪುಸ್ತಕಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಎಂಬುದು ತಿಳಿದು ಬಂದಿದೆ. ಅವುಗಳೇ ಅವರಿಗೆ ಪ್ರೇರಣೆಯಾಗಿತ್ತೇ ಎಂಬ ಪ್ರಶ್ನೆ ಮೂಡಿದೆ.

ಈತ ಮೈಸೂರಿನಲ್ಲಿ ವಾಸವಿದ್ದು, ಮೂಲತಃ ಹಾಸನ ಜಿಲ್ಲೆ ಮಲ್ಲಾಪುರ ಗ್ರಾಮದವನು. ಶಿಕ್ಷಣಕ್ಕಾಗಿಯೇ ಕುಟುಂಬಸ್ಥರು ಮೈಸೂರು ಸೇರಿದರು. ಮೈಸೂರಿನ ಮರಿಮಲ್ಲಪ್ಪದಲ್ಲಿ ಹೈಸ್ಕೂಲ್ ಓದಿದ್ದು, ಸೇಂಟ್ ಜೋಸೆಫ್‍ನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾನೆ. ಬೆಂಗಳೂರಿನ ಬಿಐಟಿಯಲ್ಲಿ ಕಂಪ್ಯೂಟರ್ ಸೈನ್ಸ್‍ನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದ ಮನೋರಂಜನ್, 2016ರಲ್ಲಿ ಕಾಂಬೋಡಿಯಾಗೆ ತೆರಳಿದ್ದ.

ಇದನ್ನೂ ಓದಿ: ದೇವಾಲಯದ ಅವ್ಯವಸ್ಥೆ: ಅಯ್ಯಪ್ಪನ ದರ್ಶನ ಸಿಗದೆ ಭಕ್ತರು ವಾಪಸ್!

ಲೋಕಸಭಾ ಕಲಾಪಕ್ಕೆ ನುಗ್ಗಿದ್ದ ಮೈಸೂರಿನ ಮನೋರಂಜನ್, ಕ್ರಾಂತಿಕಾರಿ ಪುಸ್ತಕಗಳ ಪ್ರೇಮಿಯಾಗಿದ್ದನಂತೆ. ಮೈಸೂರಿನ ಮನೋರಂಜನ್ ಮನೆಯಲ್ಲಿ ಹಲವಾರು ಐತಿಹಾಸಿಕ ಪುಸ್ತಕ ಪತ್ತೆಯಾಗಿವೆ. ಸುಭಾಶ್ ಚಂದ್ರ ಬೋಸ್, ಸ್ವಾತಿ ಚರ್ತುವೇದಿ, ಕೌಟಿಲ್ಯನ ‘ಅರ್ಥಶಾಸ್ತ್ರ’, ಪ್ಲೇಟೊ ರಚಿತ ‘ರಿಪಬ್ಲಿಕ್’, ಚೆಗುವರಾ ಅವರ ‘ಗೆರಿಲ್ಲಾ ವಾ‌ಫೇರ್’, ಲಾವೋಶೆಯ ‘ದಾವ್ ದ ಜಿಂಗ್’, ವಂದನಾ ಶಿವ ಅವರ ‘ಒನ್‌ನಸ್’, ‘ವಯಲೆನ್ಸ್ ಆಫ್ ಗ್ರೀನ್ ರೆವಲೂಷನ್’, ‘ವಾಟರ್ ವಾರ್ಸ್’, ‘ಹು ರಿಯಲೀ ಫೀಡ್ ದ ವರ್ಲ್ಡ್’, ರಿಚರ್ಡ್ ಡಿ. ವೂಲ್ಫ್ ಅವರ ‘ಡೆಮಾಕ್ರಸಿ ಆಟ್ ವರ್ಕ್ಸ್’, ಆ್ಯಡಂ ಸ್ಮಿತ್‌ನ ‘ವೆಲ್ತ್ ಆಫ್ ನೇಷನ್ಸ್’, ಲಿಯೊ ಟಾಲ್‌ಸ್ಟಾಯ್‌ನ ‘ವಾರ್ ಆ್ಯಂಡ್ ಪೀಸ್’, ರಿಚರ್ಡ್ ಡಾಕಿನ್ಸ್‌ನ ‘ದ ಗ್ರೇಟೆಸ್ಟ್ ಶೋ ಆನ್ ಅರ್ಥ್, ಚಾರ್ಲ್ಸ್ ಡಿಕನ್ಸ್‌ನ ‘ಗ್ರೇಟ್ ಎಕ್ಸ್‌ಪೆಕ್ಟೇಶನ್ಸ್’, ಅಂಬಾನಿಯ ಐತಿಹಾಸಿಕ ಕ್ರಾಂತಿಕಾರಿ ಪುಸ್ತಕಗಳು ಲಭ್ಯವಾಗಿವೆ.

RELATED ARTICLES

Related Articles

TRENDING ARTICLES