Monday, December 23, 2024

KCC ಕ್ರಿಕೆಟ್ ಟೂರ್ನಮೆಂಟ್‌ ಸೀಸನ್ 4ಕ್ಕೆ ದಿನಗಣನೆ!

ಬೆಂಗಳೂರು: ಕೆಸಿಸಿ- ಕನ್ನಡ ಚಲನಚಿತ್ರ ಕಪ್ ಸೀಸನ್ 4ಕ್ಕೆ ದಿನಗಣನೆ ಶುರುವಾಗಿದೆ. ಪ್ರತೀ ವರ್ಷದಿಂದ ಈ ವರ್ಷವೂ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಕೆಸಿಸಿ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದ್ದು, ಚಿನ್ನಸ್ವಾಮಿ ಸ್ಟೇಡಿಯಂ 3 ದಿನಗಳ ಅಖಾಡಕ್ಕೆ ಸಜ್ಜಾಗ್ತಿದೆ.

ಶಿವರಾಜ್​ಕುಮಾರ್, ಉಪೇಂದ್ರ, ಸುದೀಪ್, ಗಣೇಶ್, ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ ನೇತೃತ್ವದ ಆರು ತಂಡಗಳು ಕೆಸಿಸಿಯಲ್ಲಿ ಸೆಣಸಾಡಲಿದ್ದು, ಈ ವರ್ಷವೂ ಸಹ ಅಂತಾರಾಷ್ಟ್ರೀಯ ಮಟ್ಟದ ಪ್ರೊಫೆಷನಲ್ ಕ್ರಿಕೆಟರ್ಸ್​ ಕನ್ನಡ ಸ್ಟಾರ್ಸ್​ ಜೊತೆ ಗ್ರೌಂಡ್​ಗೆ ಇಳಿಯಲಿದ್ದಾರೆ.

ಇದನ್ನೂ ಓದಿ: ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಒಲಿದ ಅರ್ಜುನ ಪ್ರಶಸ್ತಿ!

ಡಿಸೆಂಬರ್ 23ರಿಂದ 25ರವರೆಗೆ ಸುಮಾರು 3 ದಿನಗಳ ಕಾಲ ನಡೆಯಲಿರೋ ಈ ಟೂರ್ನಮೆಂಟ್​ ಬಗ್ಗೆ ಮಾಹಿತಿ ನೀಡಲು ಕಿಚ್ಚ ಸುದೀಪ್ KSCAನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಅಲ್ಲಿ ಧ್ರುವ ಸರ್ಜಾ, ಯಶ್, ದರ್ಶನ್ ಸೇರಿದಂತೆ ಶೆಟ್ಟಿ ಟೀಂ ಆಡದೇ ಇರೋದರ ಬಗ್ಗೆ ಸ್ಪಷ್ಟನೆ ನೀಡಿದರು. ಅಲ್ಲದೆ, ಈ ವರ್ಷ ಮತ್ತಷ್ಟು ಕಲರ್​ಫುಲ್ ಹಾಗೂ ಅರ್ಥಪೂರ್ಣವಾಗಿ ಸ್ಯಾಂಡಲ್​ವುಡ್ ಒಗ್ಗಟ್ಟಿನ ಮಂತ್ರ ಜಪಿಸಲಿದೆ.

RELATED ARTICLES

Related Articles

TRENDING ARTICLES