Wednesday, January 22, 2025

ಪಾರ್ಲಿಮೆಂಟ್​ ಒಳಗೆ ನುಗ್ಗಿದ ಅಪರಿಚಿತರು!

ನವದೆಹಲಿ:  ಲೋಕಸಭೆಯಲ್ಲಿ ಭದ್ರತಾ ಲೋಪದ ಹಿನ್ನೆಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಲೋಕಸಭೆ ಸದನದ ಒಳಗೆ ನುಗ್ಗಿರುವ ಘಟನೆ ನಡೆದಿದೆ.

ಲೋಕಸಭೆ ಸದಸನ ನಡೆಯುತ್ತಿದ್ದ ವೇಳೆ ವೀಕ್ಷಕರ ಗ್ಯಾಲರಿಯಲ್ಲಿದ್ದ ವ್ಯಕ್ತಿಗಳಾದ ನೀಲಂ ಮತ್ತು ಅಮೋಲ್​ ಎಂದು ತಿಳಿದು ಬಂದಿದ್ದು ಗ್ಯಾಲರಿಯಿಂದ ಹಾರಿ ನೇರವಾಗಿ ಚರ್ಚಾ ಸದನದ ಒಳಗೆ ಅನಧಿಕೃತವಾಗಿ ಧುಮುಕಿದ್ದಾನೆ, ಬಳಿಕ ಟಿಯರ್​ ಗ್ಯಾಸ್​ ಸಿಡಿಸಿದ್ದಾನೆ. ಈಘಟನೆಯಿಂದ ಸದನದ ಒಳಗೆ ಆತಂಕ ಸೃಷ್ಟಿಸಿದ್ದಾರೆ. ಕೂಡಲೇ ಅಲರ್ಟ್​ ಆದ ಮಾರ್ಷಲ್​ಗಳು ಆತನನ್ನು ಸೆರೆ ಹಿಡಿದಿದ್ದಾರೆ.

ಈ ಅಪರಿಚಿತರು ಕರ್ನಾಟಕದ ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಪಾಸ್​ ಪಡೆದು ವೀಕ್ಷಕರಾಗಿ ಸಂಸತ್ ಸದನಕ್ಕೆ ಆಗಮಿಸಿದ್ದರು

ಇದನ್ನೂ ಓದಿ: ಮಧ್ಯಪ್ರದೇಶದ ನೂತನ ಸಿಎಂ ಮೋಹನ್ ಯಾದವ್ ಪ್ರಮಾಣ ವಚನ ಸ್ವೀಕಾರ!

ಸದ್ಯ ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಎಲ್ಲೆಡೆ ವೈರಲ್ ಆಗಿದೆ. ಈ ವಿಚಾರಕ್ಕೆ ಸಂಬಂಧಿಸಿ ದೆಹಲಿಯ ಸಂಸತ್​​ ಭವನದ ಹೊರಗಡೆಯೂ ಪ್ರತಿಭಟನೆಗಳು ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Related Articles

TRENDING ARTICLES