Monday, December 23, 2024

ಬೆಂಗಳೂರು ಸೇರಿ ರಾಜ್ಯಾದ್ಯಂತ ಮಳೆ ಕಡಿಮೆ, ಚಳಿ ಹೆಚ್ಚಳ!

ಬೆಂಗಳೂರು: ಹವಾಮಾನ ಇಲಾಖೆ ವರದಿ ಪ್ರಕಾರ, ರಾಜ್ಯದ ಬಹುತೇಕ ಕಡೆ ಗರಿಷ್ಠ ತಾಪಮಾನ ಮತ್ತು ಕನಿಷ್ಠ ತಾಪಮಾನ ಇಳಿಕೆ ಆಗಿದೆ. ಹೀಗಾಗಿ ಚಳಿಗಾಲ ಆರಂಭವಾದ ಅನುಭವವಾಗುತ್ತಿದೆ.

ಬೆಳಗಾವಿ ವಿಮಾನ ನಿಲ್ದಾಣ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಕೊಪ್ಪಳ ರಾಯಚೂರು ಭಾಗದಲ್ಲಿ 17 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ತಾಪಮಾನ ದಾಖಲಾಗಿದೆ. ವಿಜಯಪುರದಲ್ಲಿ 12, ಚಿಕ್ಕಮಗಳೂರಿನಲ್ಲಿ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಮೂಲಕ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಒಳನಾಡು ಭಾಗದಲ್ಲಿ ಚಳಿ ಆವರಿಸುತ್ತಿದೆ. ದಿನೇ ದಿನೇ ವಾತಾವರಣದಲ್ಲಿನ ತಂಪು ಹೆಚ್ಚಾಗುತ್ತಿದೆ.

ಇದನ್ನೂ ಓದಿ: ಶೀಘ್ರವೇ ಪೆಟ್ರೋಲ್-ಡೀಸೆಲ್ ದರ ಇಳಿಕೆ!?

ಬೆಂಗಳೂರಿನಲ್ಲಿ ಸದ್ಯಕ್ಕೆ ಮಳೆಯ ಯಾವ ಮುನ್ಸೂಚನೆ ಇಲ್ಲ. ಬದಲಾಗಿ ಇಲ್ಲಿ ಸಹ ತಾಪಮಾನ ತೀವ್ರಗತಿಯಲ್ಲಿ ಇಳಿಕೆ ಕಂಡು ಬಂದಿದೆ. ನಗರದಲ್ಲಿ 16 ಡಿಗ್ರಿ ಸೆಲ್ಸಿಯಸ್ ವರೆಗೆ ಕನಿಷ್ಠ ತಾಪಮಾನ ಇಳಿಕೆ ಆಗಿದೆ. ಈ ಮೂಲಕ ಬೆಂಗಳೂರು ಮತ್ತೆ ಚಳಿ ವಾತಾವರಣಕ್ಕೆ ಈ ವರ್ಷ ತಡವಾಗಿ ಮರಳಿದೆ ಎನ್ನಬಹುದು.

RELATED ARTICLES

Related Articles

TRENDING ARTICLES