Sunday, December 22, 2024

ಹೆಬ್ಬಾವನ್ನೇ ನುಂಗಲು ಯತ್ನಿಸಿದ ಕಾಳಿಂಗ ಸರ್ಪ!

ಮಂಗಳೂರು: ಕಾಳಿಂಗ ಸರ್ಪವು ಹೆಬ್ಬಾವನ್ನೇ ಬೇಟೆಯಾಡಿ ನುಂಗಿ ಹಾಕಲು ಮುಂದಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದಲ್ಲಿ‌ ನಡೆದಿದೆ.

ಕಲ್ಲಾಜೆ ಪ್ರಾಥಮಿಕ ಶಾಲೆಯ ಬಳಿಯ ನಿವಾಸಿ ಕೆ.ಬಾಲಕೃಷ್ಣ ಗೌಡ ಎಂಬವರ ಮನೆಯ ಅಂಗಳದಲ್ಲಿ ಈ ಘಟನೆ ನಡೆದಿತ್ತು, ಈ ವೇಳೆ ಹೆಬ್ಬಾವು ಕಾಳಿಂಗನನ್ನು ಸುತ್ತು ಹಾಕಿತ್ತು. ಎರಡು ಹಾವುಗಳ ಕದನವನ್ನು ನೋಡಿದ ಮನೆಯವರಿಗೆ ಏನು ಮಾಡುವುದು ಎಂದು ತೋಚದೇ ಕೊನೆಗೆ ತಕ್ಷಣಕ್ಕೆ ಸ್ನೇಕ್‌ ಅಶೋಕ್‌ ಕರೆ ಮಾಡಿದ್ದರು. ಬಳಿಕ 16 ಅಡಿ ಉದ್ದದ ಕಾಳಿಂಗ ಸರ್ಪದ ಹಿಡಿತದಲ್ಲಿದ್ದ ಹೆಬ್ಬಾವನ್ನ ಸ್ನೇಕ್​ ಅಶೋಕ್​ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

ಇದನ್ನೂ ಓದಿ: ಅಯ್ಯೋ ಪಾಪ..! ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಎರಡೂವರೆ ಎಕರೆ ಕಬ್ಬು ಬೆಳೆ ಭಸ್ಮ

ಹಾವುಗಳನ್ನು ಸೆರೆಹಿಡಿದ ಬಳಿಕ ಇಲ್ಲಿನ ಸ್ಥಳೀಯರು ನಿರಾಳರಾಗಿದ್ದಾರೆ. ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

RELATED ARTICLES

Related Articles

TRENDING ARTICLES