ಯಾದಗಿರಿ : ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಸಿದ್ಧಾರೂಢ ಮಠದಲ್ಲಿ ಜ್ಞಾನ ದಾಸೋಹ ಮಹೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿತು.
ದಾಸೋಹ ಮಹೋತ್ಸವ ಹಿನ್ನೆಲೆ ಶ್ರೀ ಸಿದ್ಧಾರೂಢ ಮಠದಲ್ಲಿ ಆಯೋಜಿಸಿದ ಜಟ್ಟಿಗಳ ಭಾರ ಎತ್ತುವ ಸ್ಪರ್ಧೆ ನೋಡುಗರನ್ನು ಹುಬ್ಬೇರಿಸುವಂತೆ ಮಾಡಿತು.
ಮಡ್ನಾಳ ಗ್ರಾಮದ 20 ವರ್ಷದ ಯುವಕ ಯಲ್ಲಪ್ಪ ಪೂಜಾರಿ 210 ಕೆ.ಜಿ ಭಾರದ ಉಸುಕಿನ ಚೀಲ ಎತ್ತಿ ಹೆಗಲ ಮೇಲೆ ಇಟ್ಟುಕೊಳ್ಳುವ ಮೂಲಕ ದೈತ್ಯ ಶಕ್ತಿ ಪ್ರದರ್ಶಿಸಿದರು. ಈ ವೇಳೆ ಶ್ರೀಮಠದ ವತಿಯಿಂದ ಯಲ್ಲಪ್ಪ ಪೂಜಾರಿಗೆ 5 ಗ್ರಾಂ ಬೆಳ್ಳಿ ಕಡಗವನ್ನು ಬಹುಮಾನವಾಗಿ ಗ್ರಾಮದ ಯುವ ಮುಖಂಡ ಸಾಬಣ್ಣ ಗೋಷಿ ತೊಡಿಸಿ ಸನ್ಮಾಸಿದರು.
ಶ್ರೀ ಮಠದ ಪೂಜ್ಯ ಭೀಮಾಶಂಕರಾನಂದ ಅವಧೂತರು ಉಸುಕಿನ ಭಾರ ಎತ್ತಿದ ಜಟ್ಟಿಗಳಿಗೆ ಶಾಲು ಹೊದಿಸಿ, ಸನ್ಮಾಸಿ, ನೆನಪಿನ ಕಾಣಿಕೆ ಕೊಟ್ಟು ಆಶೀರ್ವದಿಸಿದರು.