Wednesday, January 22, 2025

ಸರ್ಕಾರ ಪತನವಾಗುವುದು ಖಚಿತ : ಹೆಚ್‍ಡಿಕೆ ಸ್ಫೋಟಕ ಭವಿಷ್ಯ

ಮಂಡ್ಯ: ಮೇ ಕಳೆದ ಬಳಿಕ ಕಾಂಗ್ರೆಸ್​ ಸರ್ಕಾರ ಪತನವಾಗುವುದು ಖಚಿತ ಎಂದು ಜೆಡಿಸಿ ಶಾಸಕ ಮಾಜಿ ಮುಖ್ಯಮಂತ್ರಿ ಹೆಚ್‍.ಡಿ ಕುಮಾರಸ್ವಾಮಿ ಸ್ಫೋಟಕ ಭವಿಷ್ಯ ನುಡಿದಿದ್ಧಾರೆ.

ಕೆ.ಆರ್.ಪೇಟೆಯ ಬೆಳತೂರು ಗ್ರಾಮದ ದೇವಸ್ಥಾನ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಜನರ ಧ್ವನಿಯಾಗಿ ಇರುತ್ತೇನೆ. ಈ ಸರ್ಕಾರ ಯಾವುದೇ ಕಾರಣಕ್ಕೂ ಐದು ವರ್ಷಗಳ ಕಾಲ ಇರುವುದಿಲ್ಲ. ಮೇ ತಿಂಗಳ ಬಳಿಕ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಶಾಸಕರು ಗೆದ್ದಮೇಲೆ ಕೆಲಸ ಮಾಡಲಿಲ್ಲ ಎಂದುಕೊಳ್ಳಬೇಡಿ. ನೀವು ಅವರನ್ನು ಒಳ್ಳೆಯವರು ಎಂದು ಗೆಲ್ಲಿಸಿದ್ದೀರಾ. ನೀವು ಅವರ ಮೇಲೆ ಇಟ್ಟಿರುವ ಪ್ರೀತಿಯನ್ನು ಮಂಜಣ್ಣ ಕೂಡ ಇಟ್ಟುಕೊಂಡಿದ್ದಾರೆ. ನಿಮ್ಮ ಕೆಲಸಗಳನ್ನು ಶಾಸಕರ ಜೊತೆ ನಿಂತು ಮಾಡಿಸುವ ಹೊಣೆ ನನ್ನ ಮೇಲಿದೆ. ಶಾಸಕರಿಗೆ ಐದಾರು ತಿಂಗಳು ಸಮಯ ಕೊಡಿ ಎಂದು ಹೇಳಿದ್ದಾರೆ.

 

 

RELATED ARTICLES

Related Articles

TRENDING ARTICLES