Wednesday, January 22, 2025

ಬಿಗ್ ಬಾಸ್ ಮನೆಯಿಂದ ಸ್ನೇಹಿತ್ ಔಟ್ : ಕಣ್ಣೀರಿಟ್ಟ ನಮ್ರತಾ ಗೌಡ!

ಬೆಂಗಳೂರು: ಈ ವಾರ ಬಿಗ್ ಬಾಸ್​ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದ ಸ್ನೇಹಿತ್ ಬಿಗ್ ಬಾಸ್​ ಮನೆಯಿಂದ ಹೊರಗೆ ಬಂದಿದ್ದಾರೆ. 

ಹೌದು, ಬಿಗ್ ಬಾಸ್ ಆಟ ಇದೀಗ 60 ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಬಿಗ್ ಬಾಸ್ ಶೋನಿಂದ ನೀತು ಬಳಿಕ 9ನೇ ವಾರ ಸ್ನೇಹಿತ್ ಔಟ್ ಆಗಿದ್ಧಾರೆ.
ಈ ವಾರ ಕ್ಯಾಪ್ಟನ್ ಆಗಿ ಕೂಡ ಅನೇಕ ತಪ್ಪುಗಳನ್ನು ಮಾಡಿದ ಸ್ನೇಹಿತ್​ ದೊಡ್ಮನೆಯಿಂದ ಹೊರಗೆ ಹೋಗುವ ವೇಳೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ಇನ್ನೂ ಸ್ನೇಹಿತ್ ಮನೆಗೆ ಬಂದಾಗಿನಿಂದಲೂ ನಮ್ರತಾ ಜೊತೆ ಒಳ್ಳೆಯ ಸ್ನೇಹ ಬೆಳೆಸಿಕೊಂಡ್ರು. ನೀವಂದ್ರೆ ನನಗೆ ಇಷ್ಟ ಅಂತ ಹೇಳ್ತಾನೆ ಇದ್ದಾರೆ. ಆದ್ರೆ ನಮ್ರತಾ ನಾವಿಬ್ಬರು ಫ್ರೆಂಡ್ಸ್ ಎನ್ನುತ್ತಿದ್ರು. ಇದೀಗ ಸ್ನೇಹಿತ್ ಮನೆಯಿಂದ ಹೊರ ಹೋಗುವುದನ್ನು ಕಂಡು ನಮ್ರತಾ ಕಣ್ಣೀರು ಹಾಕಿದ್ದಾರೆ.

ಆಟದ ವಿಚಾರದಲ್ಲಿ ಬಹಳಷ್ಟು ಕಡೆ ಸ್ನೇಹಿತ್ ಎಡವಿದ್ದರು. ದುಪ್ಪಟು ಅಧಿಕಾರ ಗಿಟ್ಟಿಸಿಕೊಂಡು ಕ್ಯಾಪ್ಟನ್ ಆಗಿದ್ದ ಸ್ನೇಹಿತ್ ಈ ವಾರದ ಅನಾಹುತಕ್ಕೆ ಮೂಲ ಕಾರಣರಾದರು. ಸ್ನೇಹಿತ್ ನಿರ್ಧಾರದಿಂದ ಕ್ಯಾಪ್ಟನ್ ಆಗಿ ಮುಂದೆ ಬರಬೇಕಿದ್ದ ಕಡೆಯಲ್ಲಾ ಎಡವಿದ್ದೇ ಜಾಸ್ತಿ. ಹಾಗಾಗಿ ಗಂಧರ್ವರು- ರಾಕ್ಷಸರು ಜಟಾಪಟಿ ಜಾಸ್ತಿಯಾಗಿತ್ತು.

ವಿನಯ್​, ಸ್ನೇಹಿತ್, ಮೈಕಲ್​, ನಮ್ರತಾ ಬಿಗ್ ಬಾಸ್​ ಮನೆಯಲ್ಲಿ ತುಂಬಾ ಕ್ಲೋಸ್ ಆಗಿದ್ರು. ವಿನಯ್​ಗೆ ಗೆದ್ದು ಬನ್ನಿ ಬ್ರೋ ಎಂದು ಹೇಳುತ್ತಾ ಸ್ನೇಹಿತ್​ ಕಣ್ಣೀರು ಹಾಕಿ ಹೊರ ನಡೆದಿದ್ಧಾರೆ.

RELATED ARTICLES

Related Articles

TRENDING ARTICLES