Sunday, January 12, 2025

ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ ಆರಂಭ

ಬೆಂಗಳೂರು: ಇತಿಹಾಸ ಪ್ರಸಿದ್ಧ ಬಸವನಗುಡಿಯ ಕಡಲೆಕಾಯಿ ಪರಿಷೆಯು ಮೂರು ದಿನಗಳ ಕಾಲ ನಡೆಯಲಿದ್ದು, ಅಧಿಕೃತವಾಗಿ ಇಂದು ಚಾಲನೆ ಸಿಗಲಿದೆ.

ಬಸವನಗುಡಿ ಸುತ್ತಮುತ್ತ ಪರಿಷೆ ರಂಗೇರಿದೆ. ದೊಡ್ಡ ಗಣೇಶ ಮತ್ತು ದೊಡ್ಡ ಬಸವಣ್ಣ ದೇವಸ್ಥಾನದ ಸುತ್ತಮುತ್ತಲಿನ ಜನ ಸಾಗರವೇ ನೆರೆದಿತ್ತು. ಇಂದು ಅಧಿಕೃತ ಚಾಲನೆ ಸಿಗಲಿದ್ದು, ಈ ಸಂಬಂಧ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಭಾನುವಾರ ಸಿದ್ಧತೆಗಳ ಪರಿಶೀಲನೆ ನಡೆಸಿದರು.

ಕಡಲೆಕಾಯಿ ಪರಿಷೆಗೆ 7-8 ಲಕ್ಷ ಜನರು ಬರುವ ನಿರೀಕ್ಷೆ

ಸಚಿವರು ದೊಡ್ಡ ಗಣೇಶನ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಕಡಲೆಕಾಯಿ ಪರಿಷೆಯ ಸಿದ್ಧತೆಗಳನ್ನು ಪರಿಶೀಲಿಸಿದರು. ಹೋಂಗಾರ್ಡ್ ಸೇರಿದಂತೆ 600ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದೇವೆ. ಕಡಲೆಕಾಯಿ ಪರಿಷೆಗೆಯಿದೆ. ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಕಡಲೆಕಾಯಿ ಪರಿಷೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಬರುವ ಜನರಿಗೆ ಪ್ರಸಾದದ ವ್ಯವಸ್ಥೆ ಇರಲಿದೆ.

 ಸಾವಿರಕ್ಕೂ ಹೆಚ್ಚು ಮಳಿಗೆ, ಪ್ಲಾಸ್ಟಿಕ್​ ಮುಕ್ತ ಪರಿಷೆ

ಈ ವರ್ಷ ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆಗೆ ನಾನಾ ಜಿಲ್ಲೆಗಳಿಂದ 200 ರೈತರು ಹಾಗೂ ತಮಿಳುನಾಡು, ಆಂಧ್ರ ಸೇರಿದಂತೆ ನಾನಾ ರಾಜ್ಯಗಳಿಂದ ವ್ಯಾಪಾರಸ್ಥರು ಬರಲಿದ್ದು, ಹತ್ತಾರು ಬಗೆಯ ಕಡಲೆಕಾಯಿಗಳ ಮಾರಾಟಕ್ಕೆಂದೇ ಒಂದು ಸಾವಿರಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಜತೆಗೆ, ಇತರೆ ಪರಿಕರಗಳ ಮಾರಾಟಕ್ಕೆ ಸಹಸ್ರಾರು ಮಳಿಗೆಗಳನ್ನು ತೆರೆಯಲಾಗಿದೆ.

ಪರ್ಯಾಯ ಮಾರ್ಗಗಳು ಹೀಗಿವೆ

ಲಾಲ್​ಬಾಗ್​​ ವೆಸ್ಟ್​ಗೇಟ್​ ಕಡೆಯಿಂದ ವಾಣಿವಿಲಾಸ ರಸ್ತೆ ಮೂಲಕ 5ನೇ ಮುಖ್ಯರಸ್ತೆ ಚಾಮರಾಜಪೇಟೆ, ಗಾಂಧಿಬಜಾರ್ ಮುಖ್ಯರಸ್ತೆಯಿಂದ ಬುಲ್​​ಟೆಂಪಲ್ ರಸ್ತೆಯ ರಾಮಕೃಷ್ಣಾಶ್ರಮ ವೃತ್ತದಲ್ಲಿ ಬಲತಿರುವು ಪಡೆಯಬೇಕು. ಹಯವದನರಾವ್ ರಸ್ತೆ ಮೂಲಕ ಗವಿಪುರಂ 3ನೇ ಅಡ್ಡರಸ್ತೆ ಮೂಲಕ ಮೌಂಟ್​​ಜಾಯ್​ ಮೂಲಕ ಹನುಮಂತನಗರದ ಕಡೆ ತೆರಳಬಹುದಾಗಿದೆ.

ಆರ್​​.ವಿ.ಟೀಚರ್ಸ್​ ಕಾಲೇಜ್​ ಜಂಕ್ಷನ್​ ಕಡೆಯಿಂದ ಟ್ರಿನಿಟಿ ಆಸ್ಪತ್ರೆ ರಸ್ತೆ, ಕೆ.ಆರ್​​.ರಸ್ತೆಯಲ್ಲಿ ಬ್ಯೂಗಲ್​ ರಾಕ್​ ರಸ್ತೆ ಮೂಲಕ ಹನುಮಂತನಗರ ಕಡೆಗೆ ಸಂಚರಿಸುವ ವಾಹನಗಳು ಟ್ಯಾಗೋರ್ ಸರ್ಕಲ್​ನಲ್ಲಿ ಬಲತಿರುವು ಪಡೆಯಬೇಕು.

ಗಾಂಧಿಬಜಾರ್ ಮುಖ್ಯರಸ್ತೆ ಮೂಲಕ ರಾಮಕೃಷ್ಣಾಶ್ರಮ ಜಂಕ್ಷನ್​​ ಮೂಲಕ ಹಯವದನರಾವ್​ ರಸ್ತೆಯಲ್ಲಿ ಗವಿಪುರಂ ಎಕ್ಸ್​ಟೆಂಕ್ಷನ್​ 3ನೇ ಅಡ್ಡರಸ್ತೆ ಮೂಲಕ ಮೌಂಟ್​​ಜಾಯ್ ರಸ್ತೆ​ ಮೂಲಕ ಹನುಮಂತನಗರ ಕಡೆಗೆ ತೆರಳಬೇಕು.

ತ್ಯಾಗರಾಜನಗರ/ಬನಶಂಕರಿ ಕಡೆಯಿಂದ 5ನೇ ಮುಖ್ಯರಸ್ತೆ, ಎನ್​​.ಆರ್​​.ಕಾಲೋನಿ ರಸ್ತೆಯಲ್ಲಿ ಬುಲ್​ಟೆಂಪಲ್ ರಸ್ತೆ ಮೂಲಕ ಚಾಮರಾಜಪೇಟೆ ಕಡೆಗೆ ಸಂಚರಿಸುವ ವಾಹನಗಳು ಬುಲ್​ಟೆಂಪಲ್ ರಸ್ತೆಯ ಕಾಮತ್ ಯಾತ್ರಿ ನಿವಾಸ ಜಂಕ್ಷನ್​ನಲ್ಲಿ ಎಡ ತಿರುವು ಪಡೆದು ಅಶೋಕ್​​ನಗರ 2ನೇ ಕ್ರಾಸ್​ ರಸ್ತೆ ಮೂಲಕ ಕತ್ರಿಗುಪ್ಪೆ ರಸ್ತೆ ಜಂಕ್ಷನ್​ನಲ್ಲಿ ಬಲತಿರುವು ಪಡೆದು 3ನೇ ಮುಖ್ಯರಸ್ತೆ ನಾರಾಯಣಸ್ವಾಮಿ ಸರ್ಕಲ್​ನಲ್ಲಿ ಕೆ.ಜಿ.ನಗರ ಮುಖ್ಯರಸ್ತೆ ಅಥವಾ ಹಯವದನರಾವ್​ ರಸ್ತೆ ಮೂಲಕ ರಾಮಕೃಷ್ಣಾಶ್ರಮ ಜಂಕ್ಷನ್​ನಿಂದ ಚಾಮರಾಜಪೇಟೆ ಕಡೆಗೆ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

 

 

RELATED ARTICLES

Related Articles

TRENDING ARTICLES