Sunday, January 5, 2025

ಪ್ರಶ್ನೆ ಮಾಡಿದ ಪೊಲೀಸರಿಗೆ ವರ್ಗಾವಣೆ ಶಿಕ್ಷೆ!

ಮೈಸೂರು: ಕುಡಿದು ಗಲಾಟೆ ಮಾಡಿದನ್ನು ಪ್ರಶ್ನೆ ಮಾಡಿದ ಪೊಲೀಸರಿಗೆ ವರ್ಗಾವಣೆ ಶಿಕ್ಷೆ ನೀಡಿರುವ ಘಟನೆ ಮೈಸೂರು ಜಿಲ್ಲೆ ಕೆ. ಆರ್. ನಗರದಲ್ಲಿ ನಡೆದಿದೆ.

ಕೆ.ಆರ್ ನಗರ ತಾಲ್ಲೂಕು ಕಾಂಗ್ರೆಸ್ ಮಾಜಿ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ ಅವರ ಪುತ್ರ ಹಾಗೂ ಸ್ನೇಹಿತರಿಂದ ಗಲಾಟೆ ಮಾಡಲಾಗಿದ್ದು, ಪೊಲೀಸ್ ಕಾನ್ಸಟೇಬಲ್ ಪುನೀತ್ ಹಾಗೂ ಹರೀಶ್‌ಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ.

ಇದನ್ನೂ ಓದಿ: ಮಧು ಬಂಗಾರಪ್ಪ ಜೊತೆ BK ಹರಿಪ್ರಸಾದ್​ ಮುಸುಕಿನ ಗುದ್ದಾಟ!

ಯುವಕರು ಸಾರ್ವಜನಿಕ ಸ್ಥಳದಲ್ಲಿ ಕುಡಿಯುತ್ತಿದ್ದರು. ಈ ಬಗ್ಗೆ ಕಾನ್ಸಟೇಬಲ್‌ಗಳಾದ ಪುನೀತ್ ಹಾಗೂ ಹರೀಶ್ ಪ್ರಶ್ನೆ ಮಾಡಿದ್ದರು. ಈ ವೇಳೆ ಪೊಲೀಸರ ಜೊತೆ ಯುವಕರ ಮಾತಿನ ಚಕಮಕಿ ನಡೆದಿದೆ. ಯುವಕರು ಪೊಲೀಸರನ್ನೇ ಬೈದಿದ್ದಾರೆ. ಪೊಲೀಸರನ್ನ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಚೀರನಹಳ್ಳಿ ಶಿವಣ್ಣ ಮಗನಿಗೆ ಬುದ್ದಿ ಹೇಳಿ ಜಗಳ ಬಿಡಿಸಿ ಕಳುಹಿಸಿದ್ದಾರೆ. ಘಟನೆ ನಂತರ ವಾಪಸ್ಸಾಗಿದ್ದ ಪೊಲೀಸರು ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.

ಇದಾದ ಮರುದಿನ ಇಬ್ಬರು ಕಾನ್ಸಟೇಬಲ್‌ಗಳನ್ನ ವರ್ಗಾವಣೆ ಮಾಡಲಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ ಅಂತಾ ಆದೇಶ ಹೊರಡಿಸಿದ್ದಾರೆ. ಹರೀಶ್‌ಗೆ ಕೆ.ಆರ್ ನಗರ ಠಾಣೆಯಿಂದ ಬಿಳಿಕೆರೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಪುನೀತ್‌ಗೆ ನಂಜನಗೂಡು ಸಂಚಾರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಆದೇಶ ಪ್ರತಿ ಹಾಗೂ ಗಲಾಟೆ ದೃಶ್ಯಗಳು ಲಭ್ಯವಾಗಿವೆ.

RELATED ARTICLES

Related Articles

TRENDING ARTICLES